ಈ ಸಮಸ್ಯೆಯಿರುವವರು ಸಪೋಟ ಹಣ್ಣನ್ನು ಸೇವಿಸಿ

ಬುಧವಾರ, 13 ನವೆಂಬರ್ 2019 (06:40 IST)
ಬೆಂಗಳೂರು :ಸಪೋಟ ಹಣ್ಣು ತಿನ್ನಲು ಎಷ್ಟು ಸಿಹಿಯಾಗಿರುತ್ತದೆಯೋ ಅಷ್ಟೇ ಆರೋಗ್ಯ ಕ್ಕೂ ತುಂಬಾ ಒಳ್ಳೆಯದು. ಇದರಿಂದ ಅನೇಕ ಉಪಯೋಗವಿದೆ. ಕೆಲವು ಸಮಸ್ಯೆಗಳನ್ನು ನಿವಾರಿಸಲು ಇದು ರಾಮಬಾಣವಾಗಿದೆ.




ಸಪೋಟ ಹಣ್ಣು ತಿನ್ನುವುದರಿಂದ ನಿದ್ರಾಹೀನತೆ, ಆತಂಕ, ಖಿನ್ನತೆ ದೂರವಾಗುತ್ತದೆ. ಹಾಗೇ ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಸಪೋಟ ಸೇವನೆಯಿಂದ ಜೀರ್ಣಾಂಗ ಕ್ರಿಯೆ ಉತ್ತಮಗೊಳ್ಳುತ್ತದೆ. ಅಲ್ಲದೇ ಅತಿ ಹೆಚ್ಚು ಸಪೋಟ ಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. 


ಅಷ್ಟೇ ಅಲ್ಲದೇ ಇದು ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. ಶೀತ ಮತ್ತು ಕೆಮ್ಮು ಬಹಳ ಬೇಗ ಗುಣವಾಗುತ್ತದೆ. ಅಲ್ಲದೇ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ವಾಕರಿಕೆ, ತಲೆ ತಿರುಗುವುದು, ಸುಸ್ತು ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ