ಕೂದಲು ತೆಳ್ಳಗಾಗಿದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಶುಕ್ರವಾರ, 2 ನವೆಂಬರ್ 2018 (09:18 IST)
ಬೆಂಗಳೂರು: ಅಯ್ಯೋ.. ಎಷ್ಟು ದಪ್ಪಗಿತ್ತು ನನ್ನ ಕೂದಲು ಇಷ್ಟು ತೆಳ್ಳಗಾಗಿದೆಯಲ್ಲಾ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

ಅಲ್ಯುವೀರಾ
ಕೂದಲು ಬೆಳವಣಿಗೆಗೆ ಅಲ್ಯುವೀರಾಕ್ಕಿಂತ ಉತ್ತಮ ಮದ್ದು ಬೇರೊಂದಿಲ್ಲ. ಇದರ ಜೆಲ್ ನ್ನು ಕೂದಲಿಗೆ ಹಚ್ಚಿಕೊಳ್ಳುತ್ತಿದ್ದರೆ, ಕೂದಲಿನ ಜೀವ ಕಣಗಳಿಗೆ ಕಳೆ ಬರುವುದಲ್ಲದೆ, ಬೇರುಗಳನ್ನು ಸದೃಢಗೊಳಿಸುತ್ತದೆ. ಅಷ್ಟೇ ಅಲ್ಲದೆ, ತಲೆಹೊಟ್ಟು ನಿವಾರಿಸುತ್ತದೆ. ಇದರಿಂದ ಸಹಜವಾಗಿಯೇ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಅಲ್ಯುವೀರಾ ರಸ ತೆಗೆದು ಅದರ ರಸವನ್ನು ಕೂದಲುಗಳ ಬೇರುಗಳಿಗೂ ತಾಕುವಂತೆ ಚೆನ್ನಾಗಿ ಮಸಾಜ್ ಮಾಡಿ. ಈ ರೀತಿ 10 ನಿಮಿಷ ಮಸಾಜ್ ಮಾಡಿ ಅರ್ಧ ಗಂಟೆ ಹಾಗೇ ಬಿಡಿ. ಬಳಿಕ ಹದ ಬಿಸಿ ನೀರಿನಲ್ಲಿ ಕೂದಲು ತೊಳೆದುಕೊಳ್ಳಿ. ಈ ರೀತಿ ನಿಯಮಿತವಾಗಿ ಮಾಡುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ