ಅತಿಯಾದ ಲೈಂಗಿಕ ದಾಹದಿಂದ ಅಡ್ಡ ಪರಿಣಾಮಗಳೇನು ತಿಳಿದುಕೊಳ್ಳಿ

ಶನಿವಾರ, 6 ಅಕ್ಟೋಬರ್ 2018 (09:30 IST)
ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಅದೇ ರೀತಿ ಲೈಂಗಿಕ ತೃಷೆ ತೀರಿಸಿಕೊಳ್ಳಲು ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಅದು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮಬೀರುತ್ತದೆ ತಿಳಿದುಕೊಳ್ಳೋಣ.

ತಪ್ಪಿತಸ್ಥ ಭಾವನೆ
ಅತಿಯಾಗಿ ಹಸ್ತಮೈಥುನ ಮಾಡಿಕೊಂಡ ಮೇಲೆ ಕೆಲವರು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆಯಲ್ಲಿ ಖಿನ್ನತೆ ಮೈಗೂಡಿಸಿಕೊಳ್ಳುತ್ತಾರೆ. ಇದರಿಂದ ಮಾನಸಿಕ ಒತ್ತಡ, ಖಿನ್ನತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ಲೈಂಗಿಕ ಸಮಸ್ಯೆ
ಸಂಗಾತಿ ಜತೆಗೆ ಲೈಂಗಿಕ ಕ್ರಿಯೆ ನಡೆಸುವಾಗ ಕೆಲವೊಮ್ಮೆ ಸ್ಪರ್ಶ ಜ್ಞಾನ ಸಿಗದೇ ಇರುವುದು, ತೃಪ್ತಿ ಸಿಗದೇ ಇರುವುದು ಇತ್ಯಾದಿ ಸಮಸ್ಯೆ ಬರಬಹುದು. ಆದರೆ ಇದೆಲ್ಲಾ ತಾತ್ಕಾಲಿಕ. ಕ್ರಮೇಣ ಇದೆಲ್ಲಾ ಸರಿಹೋಗುತ್ತೆ.

ದೈನಂದಿನ ಜೀವನಕ್ಕೆ ತೊಂದರೆ
ಸದಾ ಅದರ ಧ್ಯಾನದಲ್ಲೇ ಮುಳುಗಿದ್ದರೆ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದು ಸಹಜ. ಸಂಗಾತಿ ಮೇಲೆ ಆಸಕ್ತಿ ಕಳೆದುಕೊಳ್ಳುವುದು, ಸಹಜ ಜೀವನದಿಂದ ದೂರವಾಗಿ ಯಾವುದೋ ಭಾವನಾ ಲೋಕದಲ್ಲಿ ಕಳೆದುಹೋಗುವುದು ಇತ್ಯಾದಿ ಸಮಸ್ಯೆ ಬರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ