ಮುಖದ ಅಂದ ಹೆಚ್ಚಾಗಬೇಕೆ ದಾಳಿಂಬೆ ಸಿಪ್ಪೆ ಬಳಸಿ!

ಗುರುವಾರ, 15 ಮಾರ್ಚ್ 2018 (11:18 IST)
ಬೆಂಗಳೂರು: ದಾಳಿಂಬೆಹಣ್ಣಿನ ಬೀಜ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ದಾಳಿಂಬೆಯ ಸಿಪ್ಪೆ ಕೂಡ ಅಷ್ಟೇ ಒಳ್ಳೆಯದು. ಮುಖದ ಅಂದ ಹೆಚ್ಚಾಗುವುದಕ್ಕೆ ಈ ದಾಳಿಂಬೆ ಸಿಪ್ಪೆ ಕೂಡ ಸಹಕಾರಿಯಾಗಿದೆಯಂತೆ. ದಾಳಿಂಬೆಯ ಸಿಪ್ಪೆಗಳಲ್ಲಿ  ಆಂಟಿಆಕ್ಸಿಡೆಂಟ್ ಅಂಶಗಳು ಅಧಿಕವಾಗಿರುತ್ತವೆ. ಇದು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಈ ಸಿಪ್ಪೆಗಳನ್ನು ಹೇಗೆಲ್ಲ ಬಳಸಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.


ಮಾಡುವ ವಿಧಾನ ದಾಳಿಂಬೆ ಸಿಪ್ಪೆಗಳನ್ನು ಒಣಗಿಸಿ, ಪುಡಿ ಮಾಡಿ ಒಂದು ಗಾಳಿಯಾಡದ ಜಾಡಿಯಲ್ಲಿ ಹಾಕಿ ಇಟ್ಟುಕೊಳ್ಳಿ. ಈ ಪುಡಿಯನ್ನು ತಿಂಗಳಾನುಗಟ್ಟಲೆ ಬಳಸಿಕೊಳ್ಳಬಹುದು. ಇದನ್ನು ಫೇಸ್ ಮಾಸ್ಕ್ ಹಾಗಿ, ಸ್ಕ್ರಬ್ ಆಗಿ ಅಥವಾ ಇತರೆ ಫೇಸ್ ಪ್ಯಾಕ್‌ಗಳ ಜೊತೆಗೆ ಬಳಸಿಕೊಳ್ಳಬಹುದು.

 
ತಾಜಾ ದಾಳಿಂಬೆ ಸಿಪ್ಪೆಯನ್ನು ಫೇಸ್ ಪ್ಯಾಕ್‌ಗಳಿಗೆ ಬಳಸಿಕೊಳ್ಳಬಹುದು. ದಾಳಿಂಬೆಯ ಸಿಪ್ಪೆಗಳನ್ನು ಸುಲಿದುಕೊಂಡು, ಅವುಗಳನ್ನು ಜಜ್ಜಿಕೊಳ್ಳಿ. ಒಂದು ಟೇಬಲ್ ಚಮಚ ದಾಳಿಂಬೆ ಸಿಪ್ಪೆಗೆ ಎರಡು ಟೇಬಲ್ ಚಮಚ ಕೆನೆಯನ್ನು ಹಾಕಿ. ನಂತರ ಇದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಹಾಕಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಮತ್ತು ಕುತ್ತಿಗೆಗೆ ಲೇಪಿಸಿಕೊಳ್ಳಿ. 15 ನಿಮಿಷ ಇದನ್ನು ಬಿಟ್ಟು, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಡೆಡ್ ಸ್ಕಿನ್ ನಿವಾರಣೆ ಆಗುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ