ಹಲ್ಲಿನಲ್ಲಿರುವ ಹುಳು ನಾಶವಾಗಲು ಈ ಮನೆಮದ್ದನ್ನು ಬಳಸಿ

ಶನಿವಾರ, 1 ಜೂನ್ 2019 (06:38 IST)
ಬೆಂಗಳೂರು : ಅತಿಯಾದ ಸಿಹಿ ತಿಂಡಿಗಳನ್ನು ಸೇವಿಸುವುದರಿಂದ ಹಲ್ಲು ಹುಳುಕಾಗುತ್ತದೆ. ಇದರಿಂದ ಹಲ್ಲು ಹಾಳಾಗುವುದಲ್ಲದೇ ನೋವು ಕಾಣಿಸಿಕೊಳ್ಳತ್ತದೆ. ಹಲ್ಲಿನಲ್ಲಿರುವ ಈ ಹುಳಗಳನ್ನು ನಾಶ ಮಾಡಲು ಈ ಮನೆಮದ್ದ್ನು ಬಳಸಿ.




2 ರಿಂದ 3 ಲವಂಗದ ಪುಡಿಯನ್ನು ಹಲ್ಲುಗಳಿಗೆ ತುಂಬಿದರೆ ಹುಳುಗಳು ನಿವಾರಣೆಯಾಗುತ್ತವೆ. ಜಾಯಿಕಾಯಿ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಹಲ್ಲುಗಳ ನಡುವೆ ಇಟ್ಟುಕೊಂಡರೆ ಹುಳುಗಳು ನಾಶವಾಗುತ್ತವೆ. ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪು ಸೇರಿಸಿ ಜಗಿದರೆ ಹಲ್ಲು ನೋವು ಕಡಿಮೆಯಾಗಿ ಹುಳುಗಳು ನಿವಾರಣೆಯಾಗುತ್ತದೆ.


ಹಲ್ಲು ತೂತಾಗಿ ಹುಳು ಆಗಿದ್ದರೆ ಇಂಗನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಪ್ರಯೋಜನವಿದೆ. ಸಾಸಿವೆ ಎಣ್ಣೆ ಮತ್ತು ಸೈಂಧವ ಉಪ್ಪು ಸೇರಿಸಿ ಪೇಸ್ಟ್‌ ಮಾಡಿ ಹಲ್ಲಿನ ನಡುವೆ ಇಟ್ಟರೆ ಹುಳುಗಳು ಕಡಿಮೆಯಾಗುತ್ತವೆ. ಬೇವಿನ ಎಲೆಗಳ ಕಷಾಯಕ್ಕೆ ಅರಿಶಿನ ಸೇರಿಸಿ ಬಾಯಿ ಮುಕ್ಕಳಿಸಿದರೆ ಹುಳುಕು ಹಲ್ಲು ಕಡಿಮೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ