ದೀರ್ಘಾವಧಿಯವರೆಗೆ ಬದುಕಬೇಕೇ? ಹೆಚ್ಚಿನ ಕ್ಯಾಲೊರಿ ನಿರ್ಬಂಧಗೊಳಿಸಿ

ಶುಕ್ರವಾರ, 1 ಜುಲೈ 2016 (11:04 IST)
ಸಾಮಾನ್ಯವಾಗಿ ವಯಸ್ಸಾಗುತ್ತಿದ್ದ ಅಧಿಕ ರೋಗಗಳು ಕಾಡಲು ಪ್ರಾರಂಭಿಸುತ್ತವೆ. ನಿಮ್ಮ ಆರೋಗ್ಯದಲ್ಲಿ ಕ್ಯಾಲೋರಿ ಅಂಶ ಹಾಗೂ ಷೋಶಕಾಂಶಗಳನ್ನು ಸಮ ಪ್ರಮಾಣದಲ್ಲಿ ಇಟ್ಟುಕೊಳ್ಳುವುದರಿಂದ ಮುಂದೆ ಬರುವಂತಹ ಕಾಯಿಲೆ ಹಾಗೂ ವಯಸ್ಸಾಗುವಿಕೆಯಲ್ಲಿ ಕಾಡುವ ಸಮಸ್ಯೆಗಳನ್ನು ದೂರವಿಟ್ಟುಕೊಳ್ಳಬಹುದು.

ಅಲ್ಲದೇ ಪೋಷಕಾಂಶಗಳು ಹಾಗೂ ಕ್ಯಾಲೋರಿ, ಕಾಯಿಲೆಗಳನ್ನು ವಿಸ್ತರಿಸುವಲ್ಲಿ ಸಹಾಯಕಾರಿಯಾಗುತ್ತವೆ ಎಂದು ನಡೆಸಲಾದ ಅಧ್ಯಯನದಲ್ಲಿ ತಿಳಿದು ಬಂದಿದೆ. 
 
ಮಧುಮೇಹ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳನ್ನು ಕ್ಯಾಲೊರಿ ಕಡಿಮೆ ಇರುವುದರಿಂದ ತಡೆಗಟ್ಟಬಹುದು. ಈ ಬಗ್ಗೆ ನಡೆಸಲಾದ ಹಲವು ಅಧ್ಯಯನಗಳಲ್ಲಿ ಕ್ಯಾಲೋರಿ ಅಂಶಗಳನ್ನು ಕಡಿಮೆ ಮಾಡಿಕೊಳ್ಳುವುದು ಹಾಗೂ ಡಯೆಟ್ ಮಾಡುವುದರಿಂದ ದೀರ್ಘಕಾಲದವರೆಗೆ ಬದುಕಬಹುದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. 
 
ಪ್ರಾಣಿಗಳ ಮೇಲೆ ನಡೆಸಲಾದ ಅಧ್ಯಯನಗಳಲ್ಲಿ ಯೂಲನ್ ವಾಂಗ್, ಯಂಗ್ ಲಿಯೂ ,ಮೈಸ್ ಗ್ರೂಪ್ ಡಯಟರಿ ನಾಲ್ಕು ವಿಭಾಗಳನ್ನು ಮಾಡಲಾಗಿತ್ತು. ಕಡಿಮೆ ಕೊಬ್ಬು, ಕಡಿಮೆ ಕ್ಯಾಲರಿ  ಹಾಗೂ ಕಡಿಮೆ ಕೊಬ್ಬಿನ ಅಂಶಗಳನ್ನು ಪತ್ತೆ ಹಚ್ಚಲು ಹಾಗೂ ಚಯಾಪಚಯ ಕ್ರೀಯೆಯ ಬಗ್ಗೆ ತಿಳಿದುಕೊಳ್ಳಲು ಮ್ಯಾಗ್ನೆಟಿಕ್ ರೆಸೊನೆನ್ಸ್ ವಿಶ್ಲೇಷಣೆಯನ್ನು ಮಾಡಲಾಗಿದೆ. 
 
ಹೆಚ್ಚಿನ ಕ್ಯಾಲರಿ ಆಹಾರ ಹಾಗೂ ಮೂತ್ರದ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಹೆಚ್ಚಿನ ಕ್ಯಾಲೋರಿ ಪರಿಣಾಮ ಬೀರಲಿದೆ. ಇವು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ