ಪ್ರತಿಯೊಬ್ಬರು ತಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ತೊಡೆದುಹಾಕಲು ಬಯಸುತ್ತಾರೆ. ದೇಹದ ತೂಕ ಕಡಿಮೆ ಮಾಡುವುದು ಸಾಮಾನ್ಯದ ಸಂಗತಿಯಲ್ಲ ಆದರೆ, ವೇಗವಾಗಿ ತೂಕ ಕಡಿಮೆ ಮಾಡಲು ಕೆಲವು ಮಾರ್ಗಗಳಿವೆ. ಕೆಲ ಪಾನೀಯಗಳನ್ನು ಕುಡಿಯುವ ಮೂಲಕ ಆರೋಗ್ಯಕರವಾಗಿ ದೇಹದ ತೂಕ ಕಡಿಮೆ ಮಾಡಬಹುದಾಗಿದೆ.
ತರಕಾರಿ ಜ್ಯೂಸ್
ಶುಂಠಿ ಜೊತೆಗೆ ಟೊಮ್ಯಾಟೊ ಮತ್ತು ಕ್ಯಾರೆಟ್ ಜ್ಯೂಸ್‌ನ್ನು ಪ್ರತಿನಿತ್ಯ ನಿಯಮಿತವಾಗಿ ಬಳಕೆ ಮಾಡಿದರೆ, ದೇಹದಲ್ಲಿ ಬೆಳೆದ ಹೆಚ್ಚುವರಿ ಕೊಬ್ಬನ್ನು ಕರಗಿಸಿ, ತೂಕ ಕಡಿಮೆ ಮಾಡಲು ಸಹಯಕವಾಗುತ್ತದೆ. ತರಕಾರಿ ಜ್ಯೂಸ್ ದೇಹಕ್ಕೆ ಮುಖ್ಯವಾದ ಪೌಷ್ಟಿಕಾಂಶ ಮತ್ತು ಆಹಾರದ ಫೈಬರ್ ಅಂಶವನ್ನು ಒದಗಿಸುತ್ತದೆ.