ಮಳೆಗಾಲದಲ್ಲಿ ಎಂತಹ ಆಹಾರ ಸೇವಿಸಬಾರದು?

ಶನಿವಾರ, 1 ಜುಲೈ 2017 (08:57 IST)
ನವದೆಹಲಿ: ಮಳೆಗಾಲ ಬಂತೆಂದರೆ ಸಾಕು. ಶೀತ ಜ್ವರ ಮುಂತಾದ ಸಮಸ್ಯೆಗಳೂ ಹಾಜರ್. ಮಳೆಗಾಲದ ಖಾಯಿಲೆಗಳಿಂದ ದೂರವಿರಬೇಕಾದರೆ ಎಂತಹ ಆಹಾರಗಳನ್ನು ದೂರಮಾಡಬೇಕು? ಇಲ್ಲಿ ನೋಡಿ.

 
ಸೊಪ್ಪು ತರಕಾರಿ
ಸೊಪ್ಪು ತರಕಾರಿ ತಂಪು ಗುಣ ಹೊಂದಿದೆ. ಈ ತರಕಾರಿ ಬೇಸಿಗೆಗೆ ಸೂಕ್ತ. ಆದರೆ ಮಳೆಗಾಲದಲ್ಲಿ ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ಬೇಗನೇ ಶೀತವಾಗುವುದು. ಯಾಕೆಂದರೆ ಇವುಗಳಲ್ಲಿ ಹುಳ ಹುಪ್ಪಟೆಗಳು, ಮಣ್ಣು ಹೆಚ್ಚಿರುವ ಕಾರಣ ಅನಾರೋಗ್ಯಕ್ಕೆ ಕಾರಣವಾಗಬಹುದು.

ಕರಿದ ತಿಂಡಿಗಳು
ಕರಿದ ತಿಂಡಿಗಳು ಚಳಿಯಾಗುವಾಗ ನಾಲಿಗೆಗೆ ರುಚಿಯೆನಿಸಬಹುದು. ಆದರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯಿಂದ ಪಕ್ಕನೇ ಕೆಮ್ಮು, ಕಫದಂತಹ ಸಮಸ್ಯೆ ಬರಬಹುದು.

ಸೀ ಫುಡ್
ಮಳೆಗಾಲದಲ್ಲಿ ಮೀನು, ಪ್ರಾನ್ಸ್ ಮತ್ತು ಕ್ರ್ಯಾಬ್ ಗಳು ಮೊಟ್ಟೆಯಿಡುವ ಕಾಲ. ಈ ಸಂದರ್ಭದಲ್ಲಿ ಅವುಗಳ ಸೇವನೆ ಉತ್ತಮವಲ್ಲ.

ಬೀದಿ ಬದಿ ಆಹಾರ
ಬೀದಿ ಬದಿ ಆಹಾರ, ಜ್ಯೂಸ್ ಸೇವನೆ ಈ ಕಾಲಕ್ಕೆ ಹೇಳಿ ಮಾಡಿಸಿದ್ದಲ್ಲ. ಹಣ್ಣುಗಳಲ್ಲಿರುವ ತೇವಾಂಶ ಬೇಗನೇ ಶೀತ ಸಂಬಂಧೀ ರೋಗಕ್ಕೆ ತುತ್ತಾಗುವಿರಿ. ಇದರ ಬದಲು ಮನೆಯಲ್ಲೇ ಹಣ್ಣುಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ