ಮಹಿಳೆಯರಲ್ಲಿ ಹಾರ್ಮೋನ್ ಏರುಪೇರು ಮಾಡಬಲ್ಲ ಆಹಾರಗಳಿವು

ಭಾನುವಾರ, 18 ಜೂನ್ 2017 (06:43 IST)
ಬೆಂಗಳೂರು: ಮಹಿಳೆಯರಲ್ಲಿ ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ಮಾನಸಿಕ ಮತ್ತು ದೈಹಿಕ ತೊಂದರೆಗಳಾಗುತ್ತವೆ. ಅಷ್ಟಕ್ಕೂ ಈ ಹಾರ್ಮೋನ್ ವೈಪರೀತ್ಯಕ್ಕೆ ಕಾರಣವಾಗುವ ಆಹಾರಗಳು ಗೊತ್ತಾ?

 
ಸಕ್ಕರೆ
ಸಕ್ಕರೆ ಮತ್ತು ಸಕ್ಕರೆಯ ಅಂಶವಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಹಾರ್ಮೋನ್ ಏರುಪೇರಾಗಬಹುದು. ಸಕ್ಕರೆ ನಮ್ಮ ನರವ್ಯೂಹವನ್ನು ಶೇ. 50 ರಷ್ಟು ದುರ್ಬಲಗೊಳಿಸುವ ಶಕ್ತಿ ಹೊಂದಿದೆ. ಹೀಗಾಗಿ ಸಕ್ಕರೆಯ ಬದಲು, ನೈಸರ್ಗಿಕವಾಗಿ ಸಿಹಿ ಹೊಂದಿರುವ ಜೇನು ತುಪ್ಪ ಸೇವಿಸಬಹುದು.

ಕೆಫೈನ್
ಕೆಫೈನ್ ಅಂಶ ನಮ್ಮ ದೇಹದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಫೈನ್ ಅಂಶ ನಮ್ಮ ಮೂಡ್ ಹಾಳು ಮಾಡಬಹುದು ಮತ್ತು ನರ ವ್ಯೂಹಕ್ಕೆ ತೊಂದರೆಯುಂಟು ಮಾಡಬಹುದು. ಹೀಗಾಗಿ ಅದರಲ್ಲೂ ವಿಶೇಷವಾಗಿ ಮುಟ್ಟು ನಿಂತ ಮಹಿಳೆಯರು ಕೆಫೈನ್ ಅಂಶವಿರುವ ಆಹಾರವನ್ನು ಸೇವಿಸಲೇಬಾರದು.

ಮದ್ಯಪಾನ
ಆಧುನಿಕ ಜಗತ್ತಿನಲ್ಲಿ ಮಹಿಳೆಯರೂ ಮದ್ಯವಸನಿಗಳಾಗುತ್ತಿದ್ದಾರೆ. ಮದ್ಯಪಾನ ನಮ್ಮ ದೇಹದ ಅಂಗಾಂಗಳಿಗೆ ಹೆಚ್ಚು ಕೆಲಸ ನೀಡುತ್ತದೆ. ಹೀಗಾಗಿ ಮದ್ಯಪಾನ ಮಾಡುವುದಕ್ಕಿಂತ ಒಂದು ಗ್ಲಾಸ್ ಬಿಯರ್ ಅಥವಾ ವೈನ್ ಸೇವಿಸುವುದು ಉತ್ತಮ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ