ಹೆಚ್ಚು ಕಾಫಿ ಕುಡಿದ್ರೆ ಏನಾಗುತ್ತೆ ಗೊತ್ತಾ... ಕಾಫಿ ಸೇವಿಸುವವರಿಗೆ ಶುಭ ಸುದ್ದಿ

ಬುಧವಾರ, 6 ಜುಲೈ 2016 (10:35 IST)
ಕಾಫಿ ಸೇವಿಸುವುವರಿಗೊಂದು ಶುಭ ಸುದ್ದಿ.. ಕಾಫಿ ಸೇವಿಸುವುದರಿಂದ ಹಲವು ಅಪಾಯಗಳನ್ನು ತಡೆಗಟ್ಟಬಟ್ಟದ್ದು, ಅಲ್ಲದೇ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಲ್ಲದ್ದು ಎಂದು ತಿಳಿಸಿದೆ. ಕಾಫಿಯನ್ನು ಲೆಕ್ಕಕ್ಕಿಂತ ಹೆಚ್ಚಾಗಿ ಸೇವನೆ ಮಾಡಿದರೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕಾಫಿ ಸಹ ಒಂದು ಆರೋಗ್ಯಯುತ ಪಾನೀಯಗಳಲ್ಲಿ ಒಂದು ಎಂದು ಹೇಳಲಾಗಿದೆ. ಕಾಫಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ ಮತ್ತು ನ್ಯೂಟ್ರಿಯೆಂಟ್ಸ್‌ಗಳಿವೆ. ಇವರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ಎಂದು ತಿಳಿದುಬಂದಿದೆ.
 
ಕಾಫಿಯನ್ನು ಹೆಚ್ಚಾಗಿ ಸೇವಿಸದೆ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಕಾಫಿ  ನಿಮ್ಮ ಆರೋಗ್ಯನ್ನು ಕಾಪಾಡಬಲ್ಲದ್ದು ಅಲ್ಲದೇ ಮೆಟಾಬಾಲಿಸಂನ್ನು ಹೆಚ್ಚಿಸಿ, ಪ್ಯಾಟೊ ಆಸಿಡ್‌ಗಳ ಆಕ್ಸಿಡೇಶನ್ ಹೆಚ್ಚಿಸುತ್ತದೆ. 
 
ಇನ್ನೂ ಕೆಲವು ಜನರು ಕಾಫಿ ಸೇವನೆ ಮಾಡುವುದರಿಂದ ಹೆಚ್ಚು ಶಕ್ತಿಯುತ ಹಾಗೂ ಸಕ್ರೀಯವಾಗಿ ಕೆಲಸ ಮಾಡುವಲ್ಲಿ ಹಾಗೂ ಸೈಡ್ ಎಫೆಕ್ಟ್‌ಗಳನ್ನು ತಡೆಯುವಲ್ಲಿ ಹೆಚ್ಚು ಸಹಾಯಕಾರಿಯಾಗಬಲ್ಲದ್ದು ಎಂದು ಅಧ್ಯಯನ ತಿಳಿಸಿದೆ. 
 
ಉತ್ತೇಜನ ನೀಡುವಂತಹ ಅಂಶಗಳು ಕಾಫಿಯಲ್ಲಿವೆ ಎಂದು ತಿಳಿಸಲಾಗಿದೆ. ಇದರಿಂದ ನೀವೂ ಪ್ರತಿನಿತ್ಯ ಅಲರ್ಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಇನ್ನೂ ಪ್ರತಿನಿತ್ಯ ದಿನಕ್ಕೆ 500 ರಿಂದ 600 ಎಂಜಿ ಕಾಫಿ ಸೇವನೆಯಿಂದ ಹಲವು ಸಮಸ್ಯೆಗಳು ಕಾಡಬಹುದು.

ಅವುಗಳಲ್ಲಿ ನಿದ್ರಾಹೀನತೆ, ನರ್ವಸ್ ಆಗುವುದು, ವಿಶ್ರಾಂತಿರಹಿತವಾಗಿರುವುದು, ಹೊಟ್ಟೆಬೇನೆ ಸಮಸ್ಯೆಗಳು, ತಲೆ ನೋವು, ನಿರ್ಜಲೀಕರಣ, ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. 
 
ಇನ್ನೂ ಮೆಡಿಕೇಷನ್ ತೆಗೆದುಕೊಳ್ಳುತ್ತಿರುವವರು ಹಾಗೂ ಹೆಚ್ಚು ಸೂಕ್ಷ್ಮವಾಗಿರುವಂತಹ ಮಂದಿ ಕಾಫಿ ಸೇವಿಸದೇ ಇರುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ