*ಪೋಷಕಾಂಶ ಭರಿತ ಆಹಾರಗಳು ಆಯ್ಕೆ: ಆರೋಗ್ಯಕರ ಆಹಾರದ ಭಾಗವಾಗಿ, ಪೂರ್ಣ ಧಾನ್ಯ,ಕಾಳುಗಳು, ಪಾಸ್ತಾ, ಹಣ್ಣುಗಳು ಮತ್ತು ತರಕಾರಿಗಳು; ಹಾಲಿನ ಉತ್ಪನ್ನಗಳು; ನೇರ ಪ್ರೋಟೀನ್ ಮೂಲಗಳು, ಬೀಜಗಳನ್ನು ಬಳಸಿ
*ಜ್ಯೂಸ್ ಮತ್ತು ಶೇಕ್ಸ್ ಸೇವಿಸಿ: ಕಡಿಮೆ ಕ್ಯಾಲೋರಿ, ಕಡಿಮೆ ಪೌಷ್ಟಿಕಾಂಶದ ಡಯಟ್ ಸೋಡಾ, ಕಾಫಿ ತ್ಯಜಿಸಿ. ಅದರ ಬದಲಿಗೆ
ಹಣ್ಣು-ತರಕಾರಿ ಜ್ಯೂಸ್, ಆರೋಗ್ಯಕರ ಶೇಕ್ಸ್ ಕುಡಿಯಿರಿ. ದ್ರವ ಪದಾರ್ಥಗಳು ಸಹ ಸಹಾಯಕ.
*ಊಟ ಮಾಡುವಾಗ ಹೆಚ್ಚೆಚ್ಚು ನೀರು ಕುಡಿಯಬೇಡಿ.
*ಇತರರೊಂದಿಗೆ ಊಟ ಮಾಡುವಾಗ ನೀವು ಎಷ್ಟು ತಿನ್ನುತ್ತೀರಿ ಎನ್ನುವ ಬಗ್ಗೆ ಲೆಕ್ಕವೇ ಇರಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಊಟ ಮಾಡುವಾಗ ಮತ್ತೊಬ್ಬ ವ್ಯಕ್ತಿಯಿದ್ದರೆ ನೀವು ಸಾಮಾನ್ಯವಾಗಿ ತಿನ್ನುವುದಕ್ಕಿಂತ ಶೇ. 35ರಷ್ಟು ಹೆಚ್ಚು ತಿನ್ನುತ್ತೀರಿ. 4 ಮಂದಿಯೊಂದಿಗೆ ಊಟ ಮಾಡುತ್ತಿದ್ದರೆ ನೀವು ಶೇ. 75ರಷ್ಟು ಹೆಚ್ಚಿಗೆ ತಿನ್ನುತ್ತೀರಂತೆ. ಇದು ನಿಮ್ಮ ದೇಹದ ತೂಕವನ್ನು ಹತ್ತು ಕೆ.ಜಿಯಷ್ಟು ಹೆಚ್ಚಿಸುತ್ತದೆ.