ಆಗಾಗ ಬರುವ ಗಂಟಲು ನೋವಿಗೆ ಏನು ಮಾಡಬೇಕು?

ಮಂಗಳವಾರ, 28 ಫೆಬ್ರವರಿ 2017 (10:16 IST)
ಬೆಂಗಳೂರು: ಇಂದಿನ ಜೀವನ ಶೈಲಿಯೋ ವಾತಾವರಣವೋ.. ಅಂತೂ ಪದೇ ಪದೇ ಶೀತ, ಗಂಟಲು ನೋವು ಬರುತ್ತಿರುತ್ತವೆ. ಈ ಸಾಮಾನ್ಯ ಸಮಸ್ಯೆಗೆ ಮಾತ್ರೆ ತೆಗೆದುಕೊಂಡ ಮೇಲೆ ಸೈನಸೈಟಿಸ್ ಸಮಸ್ಯೆ ಕಾಮನ್. ಹಾಗಾಗಿ ಗಂಟಲು ನೋವು ಬರಂದತೆ ಮಾಡಲು ಏನು ಮಾಡಬೇಕು?


ಸಿಂಪಲ್. ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನಾವು ಹೆಚ್ಚಾಗಿ ಧೂಳು, ಬಿಸಿಲಿನಲ್ಲಿ ಓಡಾಡಿದಾಗ ಅಲರ್ಜಿ ಸಮಸ್ಯೆ ಸಾಮಾನ್ಯ. ಇನ್ನು, ಕೆಲವು ಸಮಾರಂಭಗಳಿಗೆ ಹೋದಾಗ ಅಲ್ಲಿ ಕುಡಿಯುವ ನೀರು ಗಂಟಲು ನೋವಿಗೆ ಕಾರಣವಾಗುತ್ತದೆ. ಇದಕ್ಕಾಗಿ ಹೊರಗಡೆ ಹೋಗಿ ಬಂದ ತಕ್ಷಣ ಮನೆಯಲ್ಲೇ ನಾವು ಕೆಲವು ಉಪಚಾರ ಮಾಡಿಕೊಳ್ಳಬಹುದು.

ಹೊರಗಡೆ ಹೋಗಿ ಬಂದ ಮೇಲೆ ಹಬೆ ತೆಗೆದುಕೊಳ್ಳಿ. ಇದರಿಂದ ಅಲರ್ಜಿಯಿಂದ ಬರಬಹುದಾದ ಶೀತ ಸಂಬಂಧೀ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹದ ಬಿಸಿ ನೀರಿಗೆ ಉಪ್ಪು ಹಾಕಿ ಗಾರ್ಗಲ್ ಮಾಡಿಕೊಳ್ಳಿ. ಇದರಿಂದ ಗಂಟಲು ಕೆರೆತ, ನೋವು ಬಾರದು. ಇನ್ನೊಂದು ಮುಖ್ಯವಾದ ಅಂಶವೆಂದರೆ ಹೊರಗಡೆ ಹೋಗಿ ಬಂದ ತಕ್ಷಣ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊಂಡೇ ಆಹಾರ ವಸ್ತುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಹೊರಗಡೆ ನೀರು ಆರೋಗ್ಯ ಸಮಸ್ಯೆ ತರುವುದಿದ್ದರೆ, ಕೈಯಲ್ಲೊಂದು ಬಾಟಲಿ ನೀರು ಹಿಡಿದೇ ಹೋಗುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ