ಹಣ್ಣು ಯಾವಾಗ ತಿನ್ನಬೇಕು ಎಂಬ ಗೊಂದಲವೇ?

ಗುರುವಾರ, 29 ಡಿಸೆಂಬರ್ 2016 (08:51 IST)
ಬೆಂಗಳೂರು: ದಿನಕ್ಕೊಂದು ಹಣ್ಣು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ಎಲ್ಲರೂ ನಂಬಿದ್ದಾರೆ. ಆದರೆ ಹಣ್ಣು ಯಾವಾಗ ಸೇವಿಸಬೇಕು ಎನ್ನುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ.


ಕೆಲವರು ಊಟವಾದ ಮೇಲೆ ತಿನ್ನಬೇಕು ಎಂದರೆ ಇನ್ನು ಕೆಲವರು ಊಟದ ಮೊದಲೇ ಸೇವಿಸಬೇಕು ಎನ್ನುತ್ತಾರೆ. ಹಾಗಿದ್ದರೆ ಹಣ್ಣು ತಿನ್ನಲು ಬೆಸ್ಟ್ ಟೈಮ್ ಯಾವುದು? ಖಾಲಿ ಹೊಟ್ಟೆಯಲ್ಲಿ ಹಣ್ಣು ಸೇವಿಸುವುದು ಉತ್ತಮ ಎನ್ನಲಾಗುತ್ತದೆ.

ಹಣ್ಣು ತಿನ್ನುವುದು ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ದೇಹಕ್ಕೆ ಶಕ್ತಿ ಕೊಡುವುದು ಮಾತ್ರವಲ್ಲ. ಆದರೆ ಖಾಲಿ ಹೊಟ್ಟೆಯಲ್ಲೇ ಯಾಕೆ ಸೇವಿಸಬೇಕು ಎನ್ನುವುದಕ್ಕೆ ಹಲವು ಕಾರಣಗಳಿವೆ. ಹಣ್ಣುಗಳಲ್ಲಿ ಶರ್ಕರಪಿಷ್ಟ, ನಾರಿನಂಶ ಹೆಚ್ಚಿರುತ್ತದೆ.

ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹಕ್ಕೆ ಗ್ಲುಕೋಸ್ ಒದಗಿಸಿದಂತೆ. ಖಾಲಿ ಹೊಟ್ಟೆಯಲ್ಲಿ ಹಣ್ಣು ಮಾತ್ರ ಸೇವಿಸಿದಾಗ ನಮ್ಮ ಜೀರ್ಣಾಂಗ ಬಹುಬೇಗ ಅದರಲ್ಲಿರುವ ನಾರಿನಂಶ ಶರ್ಕರಪಿಷ್ಟಗಳನ್ನು ಹೀರಿಕೊಂಡು ನಮ್ಮ ಜೀರ್ಣಕ್ರಿಯೆ ಉತ್ತಮಗೊಳಿಸುವುದಲ್ಲದೆ, ಬಲ ನೀಡುತ್ತದೆ.

ಹಾಗೆಂದು ಹೊಟ್ಟೆ ತುಂಬಾ ಊಟವಾದ ತಕ್ಷಣ ಹಣ್ಣು ಸೇವಿಸದರೆ, ಹಣ್ಣು ಮತ್ತು ಊಟ ಎರಡನ್ನೂ ದೇಹ ಅರಗಿಸಿಕೊಳ್ಳುವುದಿಲ್ಲ. ಇದರಿಂದ ಹೊಟ್ಟೆ ಉರಿ, ಅಜೀರ್ಣ ಸಮಸ್ಯೆ ಉಂಟಾಗುವುದು ಸಹಜವಂತೆ. ಹಾಗಾಗಿ ಹಣ್ಣಿನ ಸತ್ವ ದೇಹದಲ್ಲಿ ಉಳಿಯಬೇಕಾದರೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕೆಂದು ಹೇಳಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ