ನಿಮ್ಮ ಮಗುವಿಗೆ ದನದ ಹಾಲು ನೀಡುತ್ತಿಲ್ಲವೇ? ಹಾಗಿದ್ದರೆ ಈ ಸುದ್ದಿ ಓದಿ

ಸೋಮವಾರ, 26 ಜೂನ್ 2017 (09:48 IST)
ಬೆಂಗಳೂರು: ಮಕ್ಕಳಿಗೆ ದಿನಕ್ಕೊಂದು ಲೋಟ ದನದ ಹಾಲಿನ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ. ಮಗುವಿಗೆ ಬೇಕಾದ ಎಲ್ಲಾ ಪೋಷಕಾಂಶಗಳೂ ದನದ ಹಾಲಿನಲ್ಲಿದೆ.

 
ದನದ ಹಾಲು ಕ್ಯಾಲ್ಶಿಯಂ ಒದಗಿಸುವುದಲ್ಲದೆ, ವಿಟಮಿನ್ ಡಿ, ಪೊಟೇಷಿಯಂ ಹೇರಳವಾಗಿ ನೀಡುತ್ತದೆ. ಹೀಗಾಗಿ ಮಗುವಿನ ಬೆಳವಣಿಗೆಗೆ ದನದ ಹಾಲು ಉತ್ತಮ ಎಂದು ನಂಬಲಾಗುತ್ತದೆ.

ಕೆಲವರು ದನದ ಹಾಲಿನ ಬದಲಾಗಿ ರೈಸ್, ಸೋಯಾ ಹಾಲು ನೀಡುತ್ತಾರೆ. ಆದರೆ ಅದು ದನದ ಹಾಲಿನಷ್ಟು ಒಳ್ಳೆಯದಲ್ಲವಂತೆ. ಇತ್ತೀಚೆಗಿನ ಅಧ್ಯಯನ ವರರದಿಯೊಂದ ಪ್ರಕಾರ ಬೇರೆ ಹಾಲು ಕುಡಿಯುವ ಮಕ್ಕಳು ಎತ್ತರ ಕಡಿಮೆಯಿರುತ್ತಾರಂತೆ.

ಟೊರೆಂಟೋದ ವೈದ್ಯರು ಈ ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ ಮೂರು ಕಪ್ ಇತರ ಹಾಲು ಸೇವಿಸುವ ಮೂರು ವರ್ಷದ ಮಗುವಿನ ಎತ್ತರ ದನದ ಹಾಲು ಸೇವಿಸುವ ಮಗುವಿಗೆ ಹೋಲಿಸಿದರೆ 1.5 ಸೆ.ಮೀ. ನಷ್ಟು ಕುಳ್ಳಗಿರುತ್ತಾರೆ ಎನ್ನಲಾಗಿದೆ. ಹಾಗಾಗಿ ನಿಮ್ಮ ಮಗು ಎತ್ತರ ಬೆಳೆಯಬೇಕೆಂದರೆ ತಪ್ಪದೇ ದನದ ಹಾಲು ನೀಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ