ಬೆಳಗಿನ ಉಪಾಹಾರಕ್ಕೆ ಯಾವ ತಿಂಡಿ ಉತ್ತಮ?

ಬುಧವಾರ, 19 ಏಪ್ರಿಲ್ 2017 (08:48 IST)
ಬೆಂಗಳೂರು: ಬೆಳಗಿನ ಬ್ರೇಕ್ ಫಾಸ್ಟ್ ಗೆ ಏನು ತಿನ್ನೋದು? ಎಲ್ಲರಿಗೂ ಇದೊಂದು ಪ್ರತಿ ನಿತ್ಯ ಕಾಡುವ ಪ್ರಶ್ನೆ. ಆದರೆ ಯಾವ ತಿಂಡಿ ತಿಂದರೆ ನೀವು ಹೆಚ್ಚು ಆರೋಗ್ಯವಾಗಿರಬಹುದು ಎಂಬುದನ್ನು ನೋಡೋಣ.

 
ಓಟ್ಸ್

ಓಟ್ಸ್ ನಲ್ಲಿ ಹೆಚ್ಚು ನಾರಿನಂಶವಿರುತ್ತದೆ. ಇದರಿಂದ ಅದು ಜೀರ್ಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದರಿಂದಾಗಿ ಹೆಚ್ಚಿನ ಶಕ್ತಿ ಬಿಡುಗಡೆಯಾಗುತ್ತದೆ. ಇದನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ.

ಮೊಳಕೆ ಕಾಳು

ಮೊಳಕೆ ಕಾಳುಗಳಲ್ಲಿ ಸಾಕಷ್ಟು ನಾರಿನಂಶ ಹಾಗೂ ಪೋಷಕಾಂಶಗಳಿರುತ್ತವೆ. ಇದು ನಮ್ಮ ಆರೋಗ್ಯಕ್ಕೆ ಅತೀ ಅಗತ್ಯ. ಅಲ್ಲದೆ ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ.

ಮೊಟ್ಟೆ

ದಿನಕ್ಕೊಂದಾದರೂ ಮೊಟ್ಟೆ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೊಟ್ಟೆ ಎನ್ನುವುದು ಪೋಷಕಾಂಶಗಳ ಆಗರ. ವಿಟಮಿನ್ ಬಿ ಮತ್ತು ಆರೋಗ್ಯಕರ ಕೊಬ್ಬು ಹೇರಳವಾಗಿ ಸಿಗುವುದು ಮೊಟ್ಟೆಯಲ್ಲಿ. ಹೀಗಾಗಿ ಬ್ರೇಕ್ ಫಾಸ್ಟ್ ಗೆ ಮೊಟ್ಟೆಯಿದ್ದರೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ