ಸ್ತನಪಾನ ಮಾಡಿಸಲು ಯಾವ ಭಂಗಿ ಸೂಕ್ತ?

ಬುಧವಾರ, 21 ಫೆಬ್ರವರಿ 2018 (08:35 IST)
ಬೆಂಗಳೂರು: ನವಜಾತ ಶಿಶುಗಳಿಗೆ ಹಾಲುಡಿಸುವ ಅಮ್ಮಂದಿರಲ್ಲಿ ಸ್ತನಪಾನ ಮಾಡಿಸುವ ಭಂಗಿಯ ಬಗ್ಗೆ ಹಲವು ಗೊಂದಲಗಳಿರುತ್ತವೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಸಣ್ಣ ಪ್ರಯತ್ನ ಮಾಡೋಣ.
 

ಬಾಣಂತಿಯರು ಮಗುವಿನ ಆರೈಕೆಗಾಗಿ ರಾತ್ರಿಯೂ ನಿದ್ರೆಗೆಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನಿದ್ರೆಯ ಅಮಲಿನಲ್ಲಿ ಎದ್ದು ಕೂರಲು ಉದಾಸೀನ ತೋರಿ ಮಲಗಿಕೊಂಡೇ ಸ್ತನ ಪಾನ ಮಾಡಿಸುತ್ತಾರೆ.

ಆದರೆ ಹೀಗೆ ಮಾಡುವುದು ಮಗುವಿನ ದೃಷ್ಟಿಯಿಂದ ಅಪಾಯಕಾರಿ. ನವ ಜಾತ ಶಿಶುಗಳಿಗೆ ಇನ್ನೂ ಆಹಾರವನ್ನು ಬೇಕಷ್ಟೇ ಒಳಗೆ ತೆಗೆದುಕೊಳ್ಳುವ, ಮತ್ತು ಅದನ್ನು ನಿಯಂತ್ರಿಸುವ ಬಗೆ ತಿಳಿದಿರುವುದಿಲ್ಲ. ಹಾಗಾಗಿ ಮಲಗಿಕೊಂಡು ನಿದ್ರೆಯ ಅಮಲಿನಲ್ಲಿ ಅಮ್ಮ ಹಾಲುಣಿಸುವಾಗ ಎಷ್ಟು ಹಾಲು ಕೊಡಬೇಕೆಂಬ ವಿವೇಚನೆಯಿಲ್ಲದೇ ಅಗತ್ಯಕ್ಕಿಂತ ಹೆಚ್ಚು ಹಾಲುಣಿಸುವ ಅಪಾಯವಿರುತ್ತದೆ. ಇದು ಕೆಲವೊಮ್ಮೆ ಮಗುವಿನ ಜೀವಕ್ಕೂ ಕುತ್ತು ತಂದ ಉದಾಹರಣೆಗಳಿವೆ. ಹಾಗಾಗಿ ಮಲಗಿಕೊಂಡು ಸ್ತನ ಪಾನ ಮಾಡಿಸುವ ಬದಲು ಕುಳಿತುಕೊಂಡ ಭಂಗಿಯಲ್ಲಿ ಸ್ತನ ಪಾನ ಮಾಡಿಸುವುದೇ ಸೂಕ್ತ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ