ಕುಚ್ಚಿಲು ಅಕ್ಕಿ ಬೆಳ್ತಿಗೆ ಅಕ್ಕಿ? v/s ನಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಸೋಮವಾರ, 14 ಆಗಸ್ಟ್ 2017 (07:29 IST)
ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಕುಚ್ಚಿಲು ಅಕ್ಕಿ ಅನ್ನ ಸೇವಿಸುವವರು ಜಾಸ್ತಿ. ಕರ್ನಾಟಕದ ಉತ್ತರ ಭಾಗಕ್ಕೆ ಬಂದಂತೆ ಬೆಳ್ತಿಗೆ ಅನ್ನ ಊಟ ಮಾಡುವವರ ಸಂಖ್ಯೆ ಜಾಸ್ತಿ. ಇದರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎಂದು ನೋಡೋಣ.

 
ನಾರಿನಂಶ: ಕುಚ್ಚಿಲು ಅಕ್ಕಿಯಲ್ಲಿ ನಾರಿನಂಶ ಜಾಸ್ತಿ ಎನ್ನಲಾಗುತ್ತದೆ. ನಾರಿನಂಶ ಅಥವಾ ಫೈಬರ್ ನಮ್ಮ ದೇಹಕ್ಕೆ ಅತ್ಯಗತ್ಯ. ಜೀರ್ಣಕ್ರಿಯೆಗೆ ಇದು ತೀರಾ ಅನಿವಾರ್ಯ. ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಿಲು ಅಕ್ಕಿಯಲ್ಲಿ ನಾರಿನಂಶ ಜಾಸ್ತಿ.

ಮ್ಯಾಗ್ನಿಶಿಯಂ: ಮ್ಯಾಗ್ನಿಶಿಯಂ ಎನ್ನುವುದು ದೇಹಕ್ಕೆ ಬೇಕಾದ ಶಕ್ತಿ ಒದಗಿಸುವ ಮತ್ತು ಆಂಟಿ ಆಕ್ಸಿಡೆಂಟ್ ಒದಗಿಸುವ ಮೂಲ. ಇದು ಎಲುಬಿನ ಬೆಳವಣಿಗೆ, ಮಾಂಸಖಂಡಗಳ ಸಡಿಲಿಕೆ, ಅಂಗಾಂಶ ಉತ್ಪಾದನೆಗೆ ಅಗತ್ಯವಾದ ಅಂಶ. ಕುಚ್ಚಿಲು ಅಕ್ಕಿಯಲ್ಲಿ ಈ ಅಂಶಗಳು ಜಾಸ್ತಿ ಎನ್ನಲಾಗಿದೆ.

ಮಧುಮೇಹಿಗಳಿಗೆ: ಮಧುಮೇಹಿಗಳಿಗೆ ಕುಚ್ಚಿಲು ಅಕ್ಕಿ ಒಳ್ಳೆಯದು. ಕುಚ್ಚಿಲು ಅಕ್ಕಿ ಸಕ್ಕರೆ ಅಂಶವನ್ನು ಸ್ಥಿರವಾಗಿರಿಸುತ್ತದೆ. ಅಲ್ಲದೆ ಇದು ದೇಹವನ್ನು ಹೀಟ್ ಆಗದಂತೆ ನೋಡಿಕೊಳ್ಳುತ್ತದೆ.

ಪೋಷಕಾಂಶಗಳು: ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ, ಕುಚ್ಚಿಲು ಅಕ್ಕಿಯಲ್ಲಿ ಪೋಷಕಾಂಶಗಳ ಪ್ರಮಾಣ ಹೆಚ್ಚಿದೆ. ಇದು ಮಧುಮೇಹ ನಿಯಂತ್ರಿಸುವುದಲ್ಲದೆ, ದೇಹಕ್ಕೆ ಬೇಕಾದ ಶಕ್ತಿ ಒದಗಿಸುತ್ತದೆ.

ಇದನ್ನೂ ಓದಿ.. ಕಾಫಿಯಲ್ಲಿದೆ ನೀವು ಊಹಿಸಲೂ ಆಗದ ರಹಸ್ಯ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ