ಚಾಕಲೇಟ್, ಚ್ಯೂಯಿಂಗ್ ಗಮ್ ಯಾಕೆ ಮಾರಕ?

ಬುಧವಾರ, 22 ಫೆಬ್ರವರಿ 2017 (09:54 IST)
ಬೆಂಗಳೂರು: ನಾವು ತಿನ್ನುವ ರೆಡಿಮೇಡ್ ಆಹಾರಗಳಲ್ಲಿ ಕೆಮಿಕಲ್ ಇರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಬಣ್ಣದ ರೂಪದಲ್ಲಿ, ಕೆಡದಂತೆ ಉಳಿಸುವ ತಂತ್ರಗಾರಿಕೆಯಲ್ಲಿ ರಾಸಾಯನಿಕ ಮಿಶ್ರಣ ಮಾಡಲಾಗುತ್ತಿದೆ.

 
ಆದರೆ ಚಾಕಲೇಟ್ ಮತ್ತು ಚ್ಯೂಯಿಂಗ್ ಗಮ್ ನಲ್ಲಿರುವ ಸಾಮಾನ್ಯ ರಾಸಾಯನಿಕವೊಂದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಇಂತಹ ಆಹಾರವನ್ನು ದೀರ್ಘ ಕಾಲ ಸಂರಕ್ಷಿಸಿಡಲು ಟಿಟಾನಿಯಂ ಆಕ್ಸೈಡ್ ನ್ನು ಬಳಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ.

ಇಂತಹ ಆಹಾರಗಳನ್ನು ಸೇವಿಸುವುದರಿಂದ ಹಲ್ಲು ತೂತು ಬೀಳುತ್ತದೆ. ಇದಲ್ಲದೆ ನಮ್ಮ ಕರುಳಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಹೊಸ ಸಂಶೋಧನೆಗಳು ಹೇಳುತ್ತವೆ. ಸಣ್ಣ ಕರುಳು ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತವೆ. ಹಾಗಾಗಿ ಇಂತಹ ಚಾಕಲೇಟ್, ಚ್ಯೂಯಿಂಗ್ ಗಮ್, ಬ್ರೆಡ್ ನಂತಹ ಆಹಾರಗಳನ್ನು ತಿನ್ನಬಾರದು ಎಂದು ಸಂಶೋಧಕರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ