ಮಹಿಳೆಯರು ಗುಪ್ತಾಂಗದಲ್ಲಿ ಅದನ್ನು ಬಳಸೋದು ಏಕೆ?

ಬುಧವಾರ, 13 ನವೆಂಬರ್ 2019 (14:49 IST)
ಪುರುಷರು, ಮಹಿಳೆಯರು ಕಾಂಡೋಮ್ ಗಳ ಬಳಕೆ ಮಾಡುವುದು ಏಕೆ? ರಕ್ಷಣೆ ನೀಡಲಿ ಎಂದು. ಆದರೆ ನಾವು ಬಳಸೋ ಕಾಂಡೋಮ್ ಎಷ್ಟು ಸುರಕ್ಷಿತ ಎಂಬುದು ಗೊತ್ತಿರಬೇಕಲ್ಲವೇ?
 

ಹ್ಯೂಮನ್ ಇಮ್ಯೂನೊಡಿಫಿಷೆನ್ಸಿ ವೈರಸ್ (HIV) ಮಾರಕ ವೈರಾಣು ಅಥವಾ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ತಗುಲಬಹುದಾದ (STD) ಮುಂತಾದ ಸೋಂಕುಗಳನ್ನು ತಡೆಗಟ್ಟಲು ಕಾಂಡೋಮ್ ಬಳಸಲ್ಪಡುತ್ತದೆ.

ಇದಲ್ಲದೆ ಗರ್ಭದಾರಣೆ ತಡೆಗಟ್ಟಲು ಕೂಡಾ ಕಾಂಡೋಮ್ ಬಳಸುವುದುಂಟು. ಪುರುಷರಿಗೆ ಹಾಗೂ ಸ್ತ್ರೀಯರಿಗೆ ಪ್ರತ್ಯೇಕವಾದ ವಿವಿಧ ಪ್ಲೇವರ್ ಗಳ ಕಾಂಡೋಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಹೆಚ್ ಐವಿ, ಎಸ್ ಟಿಡಿ ಅಥವಾ ಗರ್ಭದಾರಣೆ ತಡೆಗಟ್ಟುವಲ್ಲಿ ಕಾಂಡೋಮ್ ಗಳು ಶೇ.85 ರಷ್ಟು ಮಾತ್ರ ಯಶಸ್ವಿಯಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಭೋಗದ ಸುಖ ಹೊಂದುವ ದಂಪತಿಗಳು ವಾಟರ್ ಫ್ರೂಫ್, ಎಲಾಸ್ಟಿಕ್ ಕಾಂಡೋಮ್ ಗಳನ್ನು ಕಾಂಡೋಮ್ ಬಳಸಿದ್ದರೂ, ವೀರ್ಯಾಣುವನ್ನು ಸ್ತ್ರೀಯರ ಯೋನಿಗೆ ಸಾಗಿ ಬಿಟ್ಟು, ಬೇಡದ ಗರ್ಭದಾರಣೆಯ ಭಯ ಆವರಿಸೋದು ಕಾಮನ್, ಆಗ ಸ್ತ್ರೀಯರು ಜನನ ನಿಯಂತ್ರಣ ಗುಳಿಗೆ ನುಂಗುವುದು ಉತ್ತಮ.

erpes(ಸರ್ಪಸುತ್ತು), gonorrhea, syphilis, chlamydia ಅಥವಾ trichomoniasis ಮುಂತಾದ ಲೈಂಗಿಕ ಟ್ರಾನ್ಸ್ ಮಿಟೆಡ್ ಡಿಸೀಸ್(STDs) ಗಳನ್ನು ಲ್ಯಾಟೆಕ್ಸ್ ಅಥವಾ ಪಾಲಿಯೂರೆಥಾನ್ ನಿಂದ ಮಾಡಲ್ಪಟ್ಟ ಕಾಂಡೋಮ್ ಗಳು ಸುಲಭವಾಗಿ ಪ್ರತಿರೋಧ ಒಡ್ಡಿ ತಡೆಗಟ್ಟುತ್ತವೆ.

ದಂಪತಿಗಳಲ್ಲಿ ಯಾರಿಗಾದರೂ HIV ಸೋಂಕು ತಗುಲಿದ್ದರೆ, ಯಾವುದೇ ಶಕ್ತಿಯುತ ಕಾಂಡೋಮ್ ಬಳಸಿದರೂ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುತ್ತದೆ.   



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ