ಬೆಳಗಿನ ಹೊತ್ತು ಬಿಸಿ ನೀರು ಯಾಕೆ ಕುಡಿಯಬೇಕು?
ಮಂಗಳವಾರ, 11 ಏಪ್ರಿಲ್ 2017 (05:30 IST)
ಬೆಂಗಳೂರು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹದ ಬಿಸಿ ನೀರಿನ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ. ಆದರೆ ಯಾವುದೆಲ್ಲಾ ಕಾರಣಕ್ಕೆ ಬಿಸಿ ನೀರು ಸೇವಿಸಬೇಕು?
ಚರ್ಮ
ಹೊಳೆಯುವ, ನುಣುಪಾದ ಚರ್ಮ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಹಾಗಿದ್ದರೆ, ಬೆಳಗಿನ ಹೊತ್ತು ಹದ ಬಿಸಿ ನೀರು ಕುಡಿದರೆ ಸಾಕು.
ಮಲಬದ್ಧತೆಗೆ
ಇದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ. ಬೆಳಗಿನ ಹೊತ್ತು ಬಿಸಿ ನೀರು ಕುಡಿಯುವುದರಿಂದ ಮಲ ವಿಸರ್ಜನೆಗೆ ತಿಣುಕಾಡಬೇಕಿಲ್ಲ.
ಹಸಿವು ಹೆಚ್ಚಿಸುತ್ತದೆ
ಬೆಳ್ಳಂ ಬೆಳಗ್ಗೆ ಹಸಿವಿಲ್ಲವೆಂದು ಉಪವಾಸ ಕೂರುವವರು, ಬಿಸಿ ನೀರು ಸೇವಿಸಿದರೆ, ಹಸಿವು ಚೆನ್ನಾಗಿ ಆಗುತ್ತದೆ. ಇದರಿಂದ ಅಸಿಡಿಟಿಯಂತಹ ಸಮಸ್ಯೆಯೂ ಬರದು.
ಶೀತಕ್ಕೆ ಪರಿಹಾರ
ಶೀತ, ಅಲರ್ಜಿ ಸಮಸ್ಯೆಯಿರುವರು, ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಗಂಟಲು ಆರಾಮವಾಗುತ್ತದೆ.
ಋತುಸ್ರಾವದ ಹೊಟ್ಟೆನೋವು
ಋತಸ್ರಾವದ ದಿನಗಳಲ್ಲಿ ಹೊಟ್ಟೆ ನೋವಿನಿಂದ ಬಳಲುವರು, ಪ್ರತಿ ದಿನ ಬಿಸಿ ನೀರು ಸೇವಿಸಬಹುದು. ರಕ್ತ ಸಂಚಾರ ಸುಗಮಗೊಳಿಸಿ ನೋವು ಕಡಿಮೆ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ