ಕಬ್ಬಿನ ಹಾಲು ನಾವೇಕೆ ಕುಡಿಯಬೇಕು?

ಶುಕ್ರವಾರ, 20 ಜನವರಿ 2017 (10:50 IST)
ಬೆಂಗಳೂರು:  ಸಂಕ್ರಾಂತಿ ಬಂದರೆ ಸಾಕು. ಎಲ್ಲಿ ನೋಡಿದರಲ್ಲಿ ಕಬ್ಬಿನ ರಾಶಿ. ಎಳ್ಳು ಬೆಲ್ಲದ ಜತೆ ಕಬ್ಬಿನ ತುಂಡು ನೀಡುವುದು ಕೇವಲ ಸಂಪ್ರದಾಯ ಮಾತ್ರವಲ್ಲ.ಅದರಲ್ಲಿ ಆರೋಗ್ಯದ ಭಂಡಾರವೇ ಇದೆ. ಕಬ್ಬು ಅಥವಾ ಕಬ್ಬಿನ ಹಾಲು ಕುಡಿಯುವುದರಿಂದ ನಮಗೆ ಸಿಗುವ ಆರೋಗ್ಯಕರ ಲಾಭಗಳು ಯಾವುವು ನೋಡೋಣ.

 
ಕಬ್ಬಿನ ರಸದಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿ, ಕಾರ್ಬೋ ಹೈಡ್ರೇಟ್, ವಿಟಮಿನ್, ಕ್ಯಾಲ್ಶಿಯಂ, ಕಬ್ಬಿಣದಂಶ, ಪೊಟೇಶಿಯಂ ಮತ್ತು ಸೋಡಿಯಂನ ಅಂಶಗಳು ಹೇರಳವಾಗಿದೆ. ಇದು ಶಕ್ತಿ ವರ್ಧಕ ಪೇಯ. ದೇಹಕ್ಕೆ ತಂಪು ಕೂಡಾ. ಶೀತ ಪ್ರಕೃತಿಯವರು ಕಬ್ಬಿನ ಹಾಲಿಗೆ ಕೊಂಚ ಕಾಳುಮೆಣಸಿನ ಪುಡಿಯೊಂದಿಗೆ ಸೇವಿಸುವುದು ಉತ್ತಮ.

ಮುಖ್ಯವಾಗಿ ಕಬ್ಬನ್ನು ಹಾಗೇ ಹಲ್ಲಿನಿಂದ ಜಗಿದು ತಿನ್ನುವುದು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಹಲ್ಲಿನ ನಡುವೆ ಸಿಕ್ಕಿಕೊಂಡ ಕೊಳೆಯನ್ನು ನಿವಾರಿಸಲು ಕಬ್ಬಿನ ಜಲ್ಲೆಯನ್ನು ಜಗಿಯುವುದು ಉತ್ತಮ. ಮುಖ್ಯವಾಗಿ ಇದರ ರಸ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ಕಬ್ಬಿನ ರಸ ಮೂತ್ರಪಿಂಡದಲ್ಲಿರುವ ಕೊಳೆಯನ್ನು ನಿವಾರಿಸುತ್ತದೆ. ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಕಬ್ಬಿನ ಹಾಲು ಸೇವನೆ ಉತ್ತಮ. ಅಲ್ಲದೆ ಕಬ್ಬಿನ ಹಾಲು ಮಲಬದ್ಧತೆಗೂ ಒಳ್ಳೆಯದು. ಇದು ಮಧುಮೇಹಿಗಳಿಗೂ ಒಳ್ಳೆಯ ಪೇಯ. ಇದು ಸಿಹಿಯಾಗಿದ್ದರೂ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸುವುದಿಲ್ಲವಾದ್ದರಿಂದ ಮಧುಮೇಹಿಗಳನ್ನು ಇದನ್ನು ಕುಡಿಯಲು ಯಾವುದೇ ತೊಂದರೆಯಿಲ್ಲ. ಹಾಗಿದ್ದರ ಮತ್ತೇಕೆ ತಡ? ಬೇಡದ ಬಣ್ಣ ಬಣ್ಣದ ಜ್ಯೂಸ್ ಕುಡಿಯುವುದರ ಬದಲು ಕಬ್ಬಿನ ಹಾಲು ಕುಡಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ