ನಿದ್ದೆ ಕಡಿಮೆನಾ..? ಜಂಕ್ ಫುಡ್ ತಿನ್ಬೇಕು ಅನ್ಸತ್ತಾ..? ಯಾಕ್ ಹೀಗೆ ಗೊತ್ತಾ..?

ಮಂಗಳವಾರ, 27 ಜೂನ್ 2017 (16:57 IST)
ಚಿಕಾಗೋ:ಏನೋ ಒಂಥರಾ ಬೋರ್, ಮಲಿಗಿದ್ರೆ ನಿದ್ದೆ ಬರಲ್ಲಾ, ಹಣ್ಣು, ಜ್ಯೂಸ್ ಯಾವ್ದೂ ಬೇಡ ಅನ್ಸತ್ತೆ. ಆದ್ರೆ ಚಾಕಲೇಟ್, ಬಿಸ್ಕೆಟ್, ಜಂಕ್ ಪುಡ್ ಇದ್ರೆ ಓಕೆ ಅನ್ಸತ್ತಾ. ತುಂಬಾ ಜನರಿಗೆ ಈ ಸಮಸ್ಯೆ ಇರತ್ತೆ. ಇದಕ್ಕೆ ಕಾರಣ ಏನು ಎಂಬುದಕ್ಕೆ ಸಂಶೋದಕರು ಉತ್ತರ ಕಂಡು ಹಿಡಿದಿದ್ದಾರೆ.
 
ಸಂಶೋದಕರು ಹೇಳುವ ಪ್ರಕಾರ ಹೆಚ್ಚು ಕ್ಯಾಲರಿ ಇರುವ ಆಹಾರ ಸೇವನೆ ನಾವು ಮಾಡೊ ನಿದ್ದೆ ಮೇಲೆ ಪರಿಣಾಮ ಬೀರತ್ತಂತೆ. ಚಿಕಾಗೋದ ನಾರ್ತ್ ವೆಸ್ಟರ್ನ್ ಯುನಿವರ್ಸಿಟಿಯ ರಿಸೇರ್ಚರ್ಸ್ ಸ್ಕೂಲ್ ಆಫ್ ಫೈನ್ ಬರ್ಗ್ ಸಂಶೋಧಕರು, ಒಂದಷ್ಟು ಜನರ ಮೇಲೆ ಈ ಪ್ರಯೋಗ ಮಾಡಿನೋಡಿದ್ದಾರೆ. ಈ ಜನರಿಗೆ ವಿವಿಧ ಸಮಯದಲ್ಲಿ ನಿದ್ದೆ ಮಾಡಲು ಅವಕಾಶ ನೀಡಲಾತ್ತು. 8 ಗಂಟೆ ಮತ್ತು ನಾಲ್ಕು ಗಂಟೆಗಳ ಕಾಲ ನಿದ್ರಿಸಲು ಗಡುವು ನೀಡಲಾಗಿತ್ತು. 
 
ಒಂದು ವಾರದ ನಂತರ ನಿದ್ರೆ ಮಾಡಿದವರನ್ನು ಬೇರ್ಪಡಿಸಲಾಯಿತು, ಅದರಲ್ಲಿ ಕಡಿಮೆ ನಿದ್ರೆ ಮಾಡಿದವರ ಮಿದುಳಿಗೆ, ಹೆಚ್ಚು ಕ್ಯಾಲರಿ ಇರುವ ಆಹಾರ,  ಸಿಹಿ ತಿನಿಸು, ಚಿಪ್ಸ್ ಮತ್ತು ದಾಲ್ಚಿನ್ನಿ ರೋಲ್ ನಂತಹ ಜಂಕ್ ಫುಡ್ ಗಳು ಇಷ್ಟವಾಯಿತಂತೆ.  ಕಡಿಮೆ ನಿದ್ರಿಸುವವರ ಮಿದುಳಿಗೆ ಹೆಚ್ಚೆಚ್ಚು ತಿನ್ನಬೇಕು ಎನಿಸುತ್ತದೆ. ಜೊತೆಗೆ ಜಂಕ್ ಫುಡ್ ತಿನ್ನಬೇಕು ಎಂಬ ಇಚ್ಚೆಯಾಗುತ್ತದೆ. ಆದರೆ ರಾತ್ರಿಯಲ್ಲಿ ಉತ್ತಮವಾಗಿ ನಿದ್ರಿಸುವವರಿಗೆ ಇಂಥಹ ಸಮಸ್ಯೆ ಇರುವುದಿಲ್ಲ. ಕಡಿಮೆ ನಿದ್ರಿಸುವವರು ಹೆಚ್ಚಿನ ಆಹಾರ ತಿನ್ನುತ್ತಾರೆ, ಹೀಗಾಗಿ ಅವರ ದೇಹದ ತೂಕವು ಹೆಚ್ಚುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ