ಕಲ್ಲಂಗಡಿ ಹಣ್ಣನ್ನು ರಾತ್ರಿ ತಿನ್ನುತ್ತೀರಾ? ಈ ಸುದ್ದಿ ತಪ್ಪದೇ ಓದಿ!
ಬುಧವಾರ, 12 ಏಪ್ರಿಲ್ 2017 (08:15 IST)
ಬೆಂಗಳೂರು: ಈ ಬೇಸಿಗೆಯಲ್ಲಿ ಇಷ್ಟಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ ಹಣ್ಣು. ಆದರೆ ಹಗಲು ಎಷ್ಟು ಬೇಕಾದರೂ, ತಿನ್ನಿ. ರಾತ್ರಿ ತಿನ್ನುವ ಮೊದಲು ಈ ಸುದ್ದಿ ಓದಿ.
ಕಲ್ಲಂಗಡಿ ಹಣ್ಣು ರಾತ್ರಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಯಾಗಬಹುದು. ಬೇದಿ ಅಥವಾ ಮಲ ವಿಸರ್ಜಿಸುವಾಗ ಕಿರಿ ಕಿರಿಯಾಗುವುದು ಇತ್ಯಾದಿ ಸಮಸ್ಯೆಯಾಗಬಹುದು. ರಾತ್ರಿ ವೇಳೆ ಜೀರ್ಣಕ್ರಿಯೆ ನಿಧಾನವಾಗುವುದರಿಂದ ಕಲ್ಲಂಗಡಿ ಹಣ್ಣು ಸೇವನೆ ಉತ್ತಮವಲ್ಲ.
ಕಲ್ಲಂಗಡಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಅಂಶವಿರುವುದರಿಂದ ದೇಹ ತೂಕ ಹೆಚ್ಚುವ ಸಾಧ್ಯತೆ ಹೆಚ್ಚು. ಅಲ್ಲದೆ ಈ ಹಣ್ಣಿನಲ್ಲಿ ನೀರಿನಂಶ ಹೆಚ್ಚಿರುವುದರಿಂದ ರಾತ್ರಿ ವೇಳೆ ಆಗಾಗ ಟಾಯ್ಲೆಟ್ ಗೆ ಹೋಗಲು ಅವಸರವಾಗಬಹುದು. ಇದರಿಂದ ನಿದ್ರೆಗೆ ಭಂಗವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ