ಸೆಕ್ಸ್ ಲೈಫ್ ಎಂಜಾಯ್ ಮಾಡುವುದರಲ್ಲಿ ಮಹಿಳೆಯರು ಪುರುಷರಿಗಿಂತಲೂ ಮುಂದು!
ಭಾನುವಾರ, 16 ಜುಲೈ 2017 (06:38 IST)
ನವದೆಹಲಿ: ಮಹಿಳೆಯರು ನಾಚಿಕೆ ಸ್ವಭಾವದವರು. ಲೈಂಗಿಕ ವಿಚಾರಗಳಲ್ಲಿ ಹೆಚ್ಚು ಓಪನ್ ಅಪ್ ಆಗುವರರಲ್ಲ ಎಂದೇ ಇದುವರೆಗಿನ ನಂಬಿಕೆಯಾಗಿತ್ತು. ಆದರೆ ಅದನ್ನು ಸುಳ್ಳು ಮಾಡುವಂತಹ ವರದಿಯನ್ನು ಬ್ರಿಟನ್ ನ ತಜ್ಞರು ಹೊರಹಾಕಿದ್ದಾರೆ.
ಹಾಸಿಗೆ ವಿಚಾರಕ್ಕೆ ಬಂದರೆ, ಮಹಿಳೆಯರು ಪುರುಷರಿಗಿಂತಲೂ ಒಂದು ಕೈ ಮುಂದಂತೆ. ಮಹಿಳೆಯರು ಸೆಕ್ಸ್ ಲೈಫ್ ನ್ನು ಪುರುಷರಿಗಿಂತಲೂ ಹೆಚ್ಚು ಎಂಜಾಯ್ ಮಾಡುತ್ತಾರೆ ಎಂದು ಬ್ರಿಟನ್ ನ ಸಂಶೋಧಕರು ಕಂಡುಕೊಂಡಿದ್ದಾರೆ.
ಈ ವಿಷಯದಲ್ಲಿ ಪುರುಷರಿಗೆ ಹೆಚ್ಚು ಆಸಕ್ತಿಯಿರಬಹುದು. ಆದರೆ ಸುದೀರ್ಘ ಕಾಲ ಇದನ್ನು ಎಂಜಾಯ್ ಮಾಡುವ ಸಾಮರ್ಥ್ಯ ಹೆಚ್ಚಿರುವುದು ಮಹಿಳೆಗೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸೆಕ್ಸ್ ವಿಚಾರದಲ್ಲಿ ಹೆಚ್ಚು ಸಂತೋಷ ಪಡೆಯುತ್ತಾರೆ ಎಂದು ತಜ್ಙರು ಅಭಿಪ್ರಾಯಪಟ್ಟಿದ್ದಾರೆ.