ಮಹಿಳೆಯರು ವಾರಕ್ಕೊಮ್ಮೆಯಾದರೂ ಸೆಕ್ಸ್ ಮಾಡಲೇಬೇಕಂತೆ..! ಕಾರಣ ಇಲ್ಲಿದೆ ನೋಡಿ!

ಶನಿವಾರ, 15 ಜುಲೈ 2017 (09:43 IST)
ಬೆಂಗಳೂರು: ಮಹಿಳೆ ತನಗೆ ವಯಸ್ಸಾಗಿದೆಯೆಂದು ತೋರಿಸಿಕೊಳ್ಳಲು ಬಯಸುವುದಿಲ್ಲ. ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣಿಸಿಕೊಳ್ಳಬೇಕಾದರೆ, ದೀರ್ಘಾಯುಷಿಗಳಾಗಬೇಕಾದರೆ ಮಹಿಳೆಯರು ವಾರಕ್ಕೊಮ್ಮೆಯಾದರೂ ಸೆಕ್ಸ್ ಮಾಡಲೇಬೇಕಂತೆ.


ಹಾಗಂತ ತಜ್ಞರು ಹೇಳಿದ್ದಾರೆ. ಅಮೆರಿಕಾದ ತಜ್ಞರ ವರದಿಯ ಪ್ರಕಾರ ವಾರಕ್ಕೊಮ್ಮೆಯಾದರೂ ಸೆಕ್ಸ್ ಮಾಡುವ ಮಹಿಳೆಯರಿಗೆ ಒತ್ತಡ ಕಡಿಮೆಯಿರುತ್ತದಂತೆ. ಒತ್ತಡ ಕಡಿಮೆಯಾದಂತೆ ಆರೋಗ್ಯವೂ ಚೆನ್ನಾಗಿರುತ್ತದೆ. ಇಂತಹ ಮಹಿಳೆಯರ ಜೀವಿತಾವಧಿಯೂ ಹೆಚ್ಚುತ್ತದೆ ಎಂದಿದ್ದಾರೆ.

ಅಷ್ಟೇ ಅಲ್ಲ, ವಾರಕ್ಕೊಮ್ಮೆ ಸೆಕ್ಸ್ ಮಾಡುವ ಮಹಿಳೆಯರಿಗೆ ಮಾರಣಾಂತಿಕ ರೋಗ ಬರುವ ಸಂಭವವೂ ಕಡಿಮೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ. ಆರೋಗ್ಯಕರ ಲೈಂಗಿಕ ಜೀವನ ದೀರ್ಘಾಯುಷ್ಯಕ್ಕೆ ದಾರಿ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ.. ಬುಲೆಟ್ ನಿಂದ ರಕ್ಷಿಸಿಕೊಳ್ಳಲು ಸ್ತನಗಳ ಇಂಪ್ಲಾಂಟ್ ಸರ್ಜರಿ ಸಹಾಯಕವಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ