ಮೈಕೆಲ್ ಜಾಕ್ಸನ್ ಗೆ ಅವರ ಅಭಿಮಾನ ದೇವತೆಯ ಕಾಣಿಕೆ ಏನ್ ಗೊತ್ತೇ?
ಗುರುವಾರ, 23 ಜನವರಿ 2014 (09:45 IST)
PR
ಪಾಪ್ ಸಂಗೀತ ಲೋಕದ ಅದ್ವಿತೀಯ ನಾಯಕ ಎಂದರೆ ಮೈಕೆಲ್ ಜಾಕ್ಸನ್ . ಅವರು ತಿರುಗಿ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಬಗ್ಗೆ ಅನೇಕ ಅಭಿಮಾನಿಗಳು ತಮ್ಮ ಪ್ರಾಣಕ್ಕಿಂತ ಹೆಚ್ಚು ಇಷ್ಟ ಪಡುತ್ತಾರೆ ಅವರಲ್ಲಿ ಲೇಡಿ ಗಾಗ ಸಹ ಒಬ್ಬರಾಗಿದ್ದಾರೆ,
ಗಾಗ ತನ್ನ ಆರಾಧ್ಯ ದೈವ ಮೈಕೆಲ್ ಜಾಕ್ಸನ್ ಗಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಸದಾ ನೆನಪಿನಲ್ಲಿ ಉಳಿಯುವಂತಹದ್ದು. ಗಾಯಕಿಯಾಗಿ ಆಕೆ ತನ್ನ ಹೆಸರನ್ನು ಜಗತ್ ಪ್ರಸಿದ್ಧಿ ಮಾಡಿದ್ದಾರೆ . ಅಲ್ಲದೆ ಬೆಳ್ಳಿತೆರೆ, ಕಿರುತೆರೆಗಳಲ್ಲು ತನ್ನ ಪ್ರತಿಭೆ ತೋರಿದ್ದಾರೆ ಗಾಗ. ಸದಾ ಬ್ಯುಸಿಯಾಗಿರುವ ಈ ಚೆಲುವೆ ತನ್ನ ಆರಾಧ್ಯ ದೈವದ ನೆನಪಿಗಾಗಿ ಒಂದು ಮ್ಯೂಸಿಯಂ ಕಟ್ಟಿಸುತ್ತಿದ್ದಾರೆ.
ಇದರಲ್ಲಿ ಮೈಕೆಲ್ ಗೆ ಸಂಬಂಧಪಟ್ಟ ಫೋಟೋಗಳು, ಅಪರೂಪದ ಅನೇಕ ವಸ್ತುಗಳು ಇರುತ್ತವೆಯಂತೆ. ಕಳೆದ ಕೆಲವು ದಿನಗಳಿಂದ ಆಕೆ ಇದರ ಶೇಖರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ಹರಾಜಿನಲ್ಲಿ ಮೈಕೆಲ್ ಅವರು ಬಳಸುವ 55 ವಸ್ತುಗಳನ್ನು ಈಕೆ ಕೊಂಡರಂತೆ.ತಾನು ಕೊಂಡ ವಸ್ತುಗಳ ಸದುಪಯೋಗ ಮಾಡಲು ಆಕೆ ಜಾಕ್ಸನ್ ಅವರ ಮ್ಯೂಸಿಯಂ ಕಟ್ಟಿ ಅದರಲ್ಲಿ ಈ ವಸ್ತುಗಳನ್ನು ಇತ್ತು ಪ್ರಪಂಚಕ್ಕೆ ಮಾದರಿ ಆಗುತ್ತಿದ್ದಾರೆ. ಅಭಿಮಾನ ಹೀಗೂ ಇರುತ್ತೆ !