ಎಬಿ ಡಿವಿಲಿಯರ್ಸ್ ಐಸಿಸಿ ಟಾಪ್ ಬ್ಯಾಟ್ಸ್‌ಮನ್, ಮಿಚೆಲ್ ಸ್ಟಾರ್ಕ್ ಟಾಪ್ ಬೌಲರ್

ಐಸಿಸಿ ಪಟ್ಟಿಯಲ್ಲಿ ಟಾಪ್  ಬ್ಯಾಟ್ಸ್‌ಮನ್‌ಗಳು
ಐಸಿಸಿ ಏಕದಿನ ಶ್ರೇಯಾಂಕದ ಪಟ್ಟಿಯಲ್ಲಿ  ದಕ್ಷಿಣ ಆಫ್ರಿಕಾದ ನಾಯಕ ಎ.ಬಿ. ಡಿವಿಲಿಯರ್ಸ್ ಬ್ಯಾಟಿಂಗ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದರೆ, ಶ್ರೀಲಂಕಾದ ಕುಮಾರ ಸಂಗಕ್ಕರಾ 2ನೇ ಸ್ಥಾನ, ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ 3ನೇ ಸ್ಥಾನ ಮತ್ತು ಟೀಂ ಇಂಡಿಯಾದ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. 
 ಟಾಪ್ ಬೌಲರ್‌ಗಳು 
ಬೌಲರ್‌ಗಳ ಪೈಕಿ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಆಸೀಸ್‌ನ ಮಿಚೆಲ್ ಸ್ಟಾರ್ಕ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ 2ನೇ ಸ್ಥಾನ ಮತ್ತು ಪಾಕಿಸ್ತಾನದ ಸಯೀದ್ ಅಜ್ಮಲ್ 3ನೇ ಸ್ಥಾನ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ.  ಭಾರತದ ಯಾವೊಬ್ಬ ಬೌಲರೂ ಅಗ್ರ 10 ಶ್ರೇಯಾಂಕದ ಪಟ್ಟಿಯಲ್ಲಿ ಇಲ್ಲ.  ರವಿಚಂದ್ರನ್ ಅಶ್ವಿನ್ 14ನೇ ಶ್ರೇಯಾಂಕ ಪಡೆದಿದ್ದರೆ, ಇಶಾಂತ್ ಶರ್ಮಾ 19ನೇ ಶ್ರೇಯಾಂಕ ಗಳಿಸಿದ್ದಾರೆ. 
 
 ಅಗ್ರ ಆಲ್‌ರೌಂಡರ್‌ಗಳ ಪೈಕಿ ಬಾಂಗ್ಲಾದ ಶಕೀಬ್ ಅಲ್ ಹಸನ್ ಪ್ರಥಮ ಶ್ರೇಯಾಂಕ, ಪಾಕ್‌ನ ಮಹಮ್ಮದ್ ಹಫೀಜ್ 2ನೇ ಶ್ರೇಯಾಂಕ ಮತ್ತು ಶ್ರೀಲಂಕಾದ ಏಂಜಲೋ ಮ್ಯಾಥೀವ್ಸ್ 3 ನೇ ಶ್ರೇಯಾಂಕ ಪಡೆದಿದ್ದಾರೆ.  ಭಾರತದ ಪರ ರವೀಂದ್ರ ಜಡೇಜಾ ಏಳನೇ ಶ್ರೇಯಾಂಕ ಪಡೆದಿದ್ದಾರೆ. 
 
 ಏಕದಿನ ಪಂದ್ಯಗಳ ಟಾಪ್ ಟೀಮ್‌ಗಳು
ಆಸ್ಟ್ರೇಲಿಯಾ ಏಕ ದಿನಪಂದ್ಯಗಳಲ್ಲಿ ಅಗ್ರಶ್ರೇಯಾಂಕ ಪಡೆದಿದ್ದರೆ ಭಾರತ 2ನೇ ಶ್ರೇಯಾಂಕ, ದಕ್ಷಿಣ ಆಫ್ರಿಕಾ 3ನೇ ಶ್ರೇಯಾಂಕ ಪಡೆದಿದೆ. ನ್ಯೂಜಿಲೆಂಡ್ ನಾಲ್ಕನೇ ಶ್ರೇಯಾಂಕ ಮತ್ತು ಶ್ರೀಲಂಕಾ 5ನೇ ಶ್ರೇಯಾಂಕ ಪಡೆದಿದೆ. 

ವೆಬ್ದುನಿಯಾವನ್ನು ಓದಿ