10 ಡೋಸ್ ಕೋವಿಡ್ ಲಸಿಕೆ ಪಡೆದ ಭೂಪ!

ಭಾನುವಾರ, 12 ಡಿಸೆಂಬರ್ 2021 (17:14 IST)
ವೆಲ್ಲಿಂಗ್ಟನ್ : ಪ್ರಸ್ತುತ ಪರಿಸ್ಥಿತಿಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಗಳನ್ನು ಪಡೆಯಲು ಪ್ರಪಂಚದಾದ್ಯಂತ ಸೂಚನೆ ನೀಡಲಾಗುತ್ತಿದೆ.
 
ಬಹುತೇಕ ಎಲ್ಲಾ ಕಂಪನಿಗಳೂ ಇಂತಿಷ್ಟು ದಿನಗಳ ಅಂತರದಲ್ಲಿ ಎರಡು ಡೋಸ್ ಪಡೆಯಬಹುದಾದಂತಹ ಲಸಿಕೆಗಳನ್ನೇ ತಯಾರಿಸಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ದಿನದಲ್ಲಿ ಬರೋಬ್ಬರಿ 10 ಕೋವಿಡ್-19 ಲಸಿಕೆಗಳನ್ನು ಪಡೆದಿದ್ದು, ವಿಷಯ ತಿಳಿದ ತಜ್ಞರು ಕಳವಳಗೊಂಡಿದ್ದಾರೆ.

ವ್ಯಕ್ತಿ ಒಂದೇ ದಿನದಲ್ಲಿ ಹಲವಾರು ಲಸಿಕಾ ಕೇಂದ್ರಗಳಿಗೆ ತೆರಳಿ, ಪ್ರತೀ ಡೋಸ್ಗೂ ಹಣವನ್ನು ಪಾವತಿ ಮಾಡಿಯೇ ತೆಗೆದುಕೊಂಡಿರುವುದು ತಿಳಿದುಬಂದಿದೆ. ಈ ರೀತಿಯಾಗಿ ಮಿತಿ ಮೀರಿ ಲಸಿಕೆಗಳನ್ನು ತೆಗೆದುಕೊಂಡಿರುವುದು ಅವನ ಜೀವಕ್ಕೆ ಅಪಾಯವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. 
ಈ ಘಟನೆಗೆ ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಸಚಿವಾಲಯ ಮುಂದೆ ಇಂತಹ ಘಟನೆ ಎಂದಿಗೂ ಮರುಕಳಿಸದಂತೆ ಎಚ್ಚರ ವಹಿಸಿದೆ.

ಕೋವಿಡ್-19 ಲಸಿಕೆಗಳನ್ನು ಅತಿಯಾಗಿ ತೆಗೆದುಕೊಂಡಿರುವ ವ್ಯಕ್ತಿಗಳು ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಲು ಸೂಚಿಸಿದೆ. ಇಲ್ಲಿಯವರೆಗೆ ಮಿತಿ ಮೀರಿ ಡೋಸ್ಗಳನ್ನು ಪಡೆದುಕೊಂಡಿರುವ ವ್ಯಕ್ತಿಗಳ ಯಾವುದೇ ಡೇಟಾ ಸಂಗ್ರಹವಾಗಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ