ಇಬ್ಬರು ಹುಡುಗಿಯರನ್ನು ಹುರಿದು ಮುಕ್ಕಿದ 15 ಮಂದಿ ಕಾಮುಕರು

ಮಂಗಳವಾರ, 27 ಅಕ್ಟೋಬರ್ 2020 (07:24 IST)
ಪಾಕಿಸ್ತಾನ :  15 ಮತ್ತು 17 ವರ್ಷದ ಇಬ್ಬರು ಹುಡುಗಿಯರನ್ನು ಅಪಹರಿಸಿ 15 ಮಂದಿ ಪುರುಷರು 6 ದಿನಗಳ ಕಾಲ ಮಾನಭಂಗ ಎಸಗಿದ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ಇಬ್ಬರು ಹುಡುಗಿಯರನ್ನು 11 ಮಂದಿ ಪುರುಷರು ಸೇರಿ ಅಪಹರಣ ಮಾಡಿದ್ದಾರೆ.  ಬಳಿಕ ಅವರನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಕನಿಷ್ಠ 15 ಮಂದಿ ಸೇರಿ ಮಾನಭಂಗ ಎಸಗಿದ್ದಲ್ಲದೇ ಅದನ್ನು ಚಿತ್ರೀಕರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪಾಪಿಗಳು ಹುಡುಗಿಯರು ಮನೆಗೆ ಬಂದ ಬಳಿಕವು ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ.

ಇದರಿಂದ ಬೇಸತ್ತ ಸಂತ್ರಸ್ತೆಯರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ