ಐಪಿಎಲ್ 13: ಒಂದೇ ಒಂದು ಪಂದ್ಯ ಸೋತರೂ ಮುಗೀತು ಕೆಎಲ್ ರಾಹುಲ್ ಪಡೆ ಕತೆ
ಮಂಗಳವಾರ, 20 ಅಕ್ಟೋಬರ್ 2020 (11:40 IST)
ದುಬೈ: ಐಪಿಎಲ್ 13 ರಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ರೋಚಕ ಗೆಲುವು ಸಾಧಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ. ಆದರೆ ಇದರ ಹಾದಿ ಸುಲಭವಲ್ಲ.
ಪಂಜಾಬ್ ಒಟ್ಟು ಒಂಭತ್ತು ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಗೆಲುವು ಕಂಡಿದೆ. ಇನ್ನು ಐದು ಲೀಗ್ ಪಂದ್ಯಗಳನ್ನಾಡಲಿದೆ. ಈ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬಹುದಾಗಿದೆ. ಆದರೆ ಒಂದೇ ಒಂದು ಪಂದ್ಯ ಸೋತರೂ ಪಂಜಾಬ್ ಪ್ಲೇ ಆಫ್ ಕನಸು ಭಗ್ನವಾಗಲಿದೆ. ರಾಜಸ್ಥಾನ್ ರಾಯಲ್ಸ್, ಹೈದರಾಬಾದ್ ತಂಡದ್ದಕ್ಕೂ ಇದೇ ಕತೆ. ಉಳಿದೆಲ್ಲಾ ಪಂದ್ಯಗಳು ಈ ತಂಡಗಳಿಗೆ ನಿರ್ಣಾಯಕವಾಗಲಿದೆ.