ಅಮೆಜಾನ್‍ಗೆ 202 ಕೋಟಿ ರೂ. ದಂಡ!?

ಶನಿವಾರ, 18 ಡಿಸೆಂಬರ್ 2021 (10:29 IST)
ನವದೆಹಲಿ :  ಆನ್ಲೈನ್ ಶಾಪಿಂಗ್ನಲ್ಲಿ ಹೆಸರುವಾಸಿಯಾದ ಅಮೆಜಾನ್ ಮತ್ತು ಭಾರತದ ಫ್ಯೂಚರ್ ಗ್ರೂಪ್ ಜೊತೆಗಿನ 2019ರ ಒಪ್ಪಂದವನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ರದ್ದುಗೊಳಿಸಿ, ಅಮೆಜಾನ್ಗೆ 202 ಕೋಟಿ ರೂ. ದಂಡ ವಿಧಿಸಿದೆ.

ಭಾರತದ ಫ್ಯೂಚರ್ ಗ್ರೂಪ್ ಜೊತೆ ಅಮೆರಿಕಾದ ಅಮೆಜಾನ್ 2019ರಲ್ಲಿ ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಈ ನಡುವೆ ಫ್ಯೂಚರ್ ಗ್ರೂಪ್ 2019ರಲ್ಲಿ 24,713 ಕೋಟಿ ರೂಪಾಯಿಯ ತನ್ನ ರಿಟೇಲ್ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಗೆ ಮಾರಾಟ ಮಾಡಲು ಯತ್ನಿಸಿತು.

ಆಗ ಅಮೆಜಾನ್ ಇದ್ದಕ್ಕೆ ತಕರಾರು ಎತ್ತಿತ್ತು.  ಮಾರಾಟಕ್ಕೆ ಅಪಸ್ವರ ಎತ್ತಿದ್ದಕ್ಕೆ ಫ್ಯೂಚರ್ ಗ್ರೂಪ್ ಸಿಸಿಐಗೆ ದೂರು ದಾಖಲಿಸಿತ್ತು. ಇದೀಗ ದೂರನ್ನು ಪಲೀಶಿಸಿ ಸಿಸಿಐ 57 ಪುಟಗಳ ಆದೇಶವನ್ನು ಹೊರಡಿಸಿದೆ. ಜೊತೆಗೆ ಈ ಹಿಂದೆ 2019ರಲ್ಲಿ ಮಾಡಿದ ಡೀಲ್ಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ.

ಹಾಗಾಗಿ ಅಲ್ಲಿಯ ವರೆಗೆ 2019ರಲ್ಲಿ ನೀಡಲಾಗಿರುವ ಅನುಮೋದನೆ ಸ್ಥಗಿತವಾಗಿರುತ್ತದೆ ಎಂದು ಆದೇಶಿಸಿದೆ. ಇದರಿಂದ ಅಮೆಜಾನ್ಗೆ ಹಿನ್ನಡೆ ಉಂಟಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ