ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅಕ್ಟೋಬರ್ 4ರಿಂದ ಪ್ರಾರಂಭ

ಶುಕ್ರವಾರ, 24 ಸೆಪ್ಟಂಬರ್ 2021 (20:58 IST)
ಆನ್‌ಲೈನ್ ಶಾಪಿಂಗ್ ಮೂಲಕ ಖ್ಯಾತಿ ಗಳಿಸಿರುವ “ಅಮೆಜಾನ್ ಸಂಸ್ಥೆ”  “ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್” (ಜಿಐಎಫ್)ನನ್ನು ಇದೇ ಅಕ್ಟೋಬರ್ 4 ರಿಂದ ದೇಶಾದ್ಯಂತ ಆರಂಭಿಸುವುದಾಗಿ ಘೋಷಿಸಿದೆ. 
 
ವರ್ಚುವಲ್ ಮೂಲಕ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಮೇಜಾನ್ ಇಂಡಿಯಾದ ವೈಸ್ ಪ್ರೆಸಿಡೆಂಟ್ ಮನೀಶ್ ರಿವಾರಿ, ವಿಶೇಷ ಕೊಡುಗೆಗಳ ಈ ಬಗ್ಗೆ ಮಾಹಿತಿ ನೀಡಿದರು. ಪ್ರತಿ ವರ್ಷ ಅಮೆಜಾನ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬರಲಾಗಿದೆ. ಈ ವರ್ಷವೂ ಸಹ ದಸರಾ, ದೀಪವಾಳಿ ಸಮೀಪಿಸುತ್ತಿದ್ದು, ಇದರ ಪ್ರಯುಕ್ತವಾಗಿ ಜನರಿಗೆ ವಿಶೇಷ ರಿಯಾಯಿಗಳೊಂದಿಗೆ ಎಲ್ಲಾ ಬಗೆಯ ವಸ್ತುಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲು ಉತ್ಸುಕರಾಗಿದ್ದೇವೆ ಎಂದರು.
ಸಣ್ಣ ಮತ್ತು ಮಧ್ಯಮ ವ್ಯಾಪರಿಗಳು ಹಾಗೂ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಮೆಜಾನ್ ಸಾಕಷ್ಟು ಶ್ರಮಿಸುತ್ತಿದೆ. ಅವರಿಗೆ ವೇದಿಕೆ ಕಲ್ಪಿಸಿಕೊಟ್ಟು, ಅವರ ಗುಣಮಟ್ಟದ ಉತ್ಪನ್ನಗಳನ್ನ ಜನರಿಗೆ ತಲುಪಿಸುವ ಜವಾಬ್ದಾರಿ ಹೊತ್ತಿದೆ. ದೇಶಾದ್ಯಂತ 450ಕ್ಕೂ ಹೆಚ್ಚು ನಗರಗಳಿಂದ 75 ಸಾವಿರಕ್ಕೂ ಹೆಚ್ಚು ಸ್ಥಳೀಯ ವ್ಯಾಪರಿಗಳಿಗೆ ಇಲ್ಲಿ ವೇದಿಕೆ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.  
 
ವಿಶೇಷ ಕೊಡುಗೆಗಳು: ಈ ಬಾರಿಯಾ ಅಮೆಜಾನ್ ಗ್ರೇಟ್ ಫೆಸ್ಟಿವಲ್‌ನಲ್ಲಿ ಸಾಕಷ್ಟು ಆಫರ್, ಕ್ಯಾಶ್‌ಬ್ಯಾಕ್, ಹೊಸ ಉತ್ಪನ್ನಗಳ ಬಿಡುಗಡೆ ಹಾಗೂ ಫ್ರೀ ಕೂಪನ್‌ಗಳನ್ನು ಉತ್ಪನ್ನಗಳ ಖರೀದಿ ಮೇಲೆ ನೀಡಲಾಗುತ್ತಿದೆ. ಅಲ್ಲದೆ, ಎಲ್ಲಾ ಬಗೆಯ ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಈ ಫೆಸ್ಟಿವಲ್‌ನಲ್ಲಿ ದಿನಸಿ, ಫ್ಯಾಷನ್, ಸೌಂದರ್ಯ, ಸ್ಮಾರ್ಟ್ಫೋನ್, ಟಿವಿ, ಎಲೆಕ್ಟ್ರಾನಿಕ್ಸ್, ಉಡುಪು ಸೇರಿದಂತೆ ಸಾವಿರಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದರ ಜೊತೆಗೆ ಪ್ರೈಮ್ ವಿಡಿಯೋ ಚಾನೆಲ್‌ನನ್ನು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗುತ್ತಿದ್ದು, ಅಮೆಜಾನ್ ಪ್ರೈಮ್ ಹೊಂದಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
 
2 ಮಿಲಿಯನ್ ಉದ್ಯೋಗ ಸೃಷ್ಠಿ: ಅಮೆಜಾನ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಕಲ್ಪಿಸಿದ್ದು, 2025ರೊಳಗೆ  2 ಮಿಲಿಯನ್ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.
amozan

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ