ಭೀಕರ ಪ್ರವಾಹದಲ್ಲಿ 5,300 ಜನರ ದುರ್ಮರಣ

ಗುರುವಾರ, 14 ಸೆಪ್ಟಂಬರ್ 2023 (12:21 IST)
ಟ್ರಿಪೋಲಿ : ಲಿಬಿಯಾದಲ್ಲಿ ಉಂಟಾಗಿರುವ ಭೀಕರ ಮಳೆಯಿಂದ ಉಂಟಾದ ಪ್ರವಾಹದಿಂದ 2 ಅಣೆಕಟ್ಟೆಗಳು ಒಡೆದು 5,300 ಜನ ಸಾವನ್ನಪ್ಪಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಕರಾವಳಿಯ ನಗರವಾದ ಪೆರ್ನಾ ಅತ್ಯಂತ ಹೆಚ್ಚು ಹಾನಿಗೊಳಾಗಿದೆ. ಇಡೀ ನಗರವನ್ನು ವಿಪತ್ತು ಪ್ರದೇಶ ಎಂದು ಘೋಷಿಸಲಾಗಿದೆ. ಅವಶೇಷಗಳಿಂದ ಸುಮಾರು 1,000 ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ.

ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಹಲವಾರು ರಕ್ಷಣಾ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಿಂದ ಹಲವಾರು ಕಟ್ಟಡಗಳು ಹಾಗೂ ವಾಹನಗಳು ಹಾನಿಗೊಳಗಾಗಿವೆ. ಮೃತದೇಹಗಳು ಎಲ್ಲೆಂದರಲ್ಲಿ ಬಿದ್ದಿವೆ. ಅನೇಕರು ಮೃತಪಟ್ಟ ಕುಟುಂಬಸ್ಥರ ಶವಗಳ ಹುಡುಕಾಟದಲ್ಲಿ ತೊಡಗಿರುವುದು ಕಂಡು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ