ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಸದ್ಯಕ್ಕಿಲ್ಲ

ಶನಿವಾರ, 29 ಜುಲೈ 2023 (18:08 IST)
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲೂ ಸತತ ಮಳೆಯಾದ ಹಿನ್ನೆಲೆ ಕೃಷ್ಣಾ ನದಿಯಲ್ಲಿ 1ಲಕ್ಷ 10 ಸಾವಿರ ಕ್ಯೂಸೆಕ್​​​ ನೀರಿನ ಒಳ ಹರಿವು ಹೆಚ್ಚಾಗಿದೆ. ದೂಧಗಂಗಾ, ವೇದಗಂಗಾ ನದಿ ದಂಡೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಿನ್ನೆ ಸಂಭವನೀಯ ಪ್ರವಾಹ ಪ್ರದೇಶಗಳಿಗೆ ಡಿಸಿ ಭೇಟಿ ನೀಡಿದ್ದು, ನಿಪ್ಪಾಣಿ ಭಾಗದಲ್ಲಿ ಕಾಳಜಿ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿದೆ. ಅಗತ್ಯ SDRF, NDRF ಸಿಬ್ಬಂದಿಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. ಚಿಕ್ಕೋಡಿ ಭಾಗದ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಸದ್ಯಕ್ಕಿಲ್ಲ. ಆದರೂ ಜಿಲ್ಲಾಡಳಿತ ಅಲರ್ಟ್​​​ ಘೋಷಿಸಿದೆ. ಬೋಟ್​​ಗಳ ವ್ಯವಸ್ಥೆ ಮಾಡಲು ಡಿಸಿ ಆದೇಶ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ