ಇರಾಕಿ ಸೇನಾಪಡೆಗಳಿಂದ 60 ಐಸಿಸ್ ಉಗ್ರರ ನರಮೇಧ

ಮಂಗಳವಾರ, 18 ಏಪ್ರಿಲ್ 2017 (20:21 IST)
ಮೊಸುಲ್‌‌ನಲ್ಲಿ ಇರಾಕಿ ಸೇನಾಪಡೆಗಳು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ 60 ಮಂದಿ ಐಎಸ್‌ಐಎಸ್ ಉಗ್ರರ ನರಮೇಧಗೈದಿವೆ ಎಂದು ಇರಾಕ್ ಸರಕಾರದ ಮೂಲಗಳು ತಿಳಿಸಿವೆ
 
ಮೋಸುಲ್‌ನಲ್ಲಿರುವ ಅಲ್-ಫಾರೂಕ್ ಪ್ರದೇಶ ಮತ್ತು ಅಲ್-ನೂರಿ ಮಸೀದಿಯಲ್ಲಿ ಐಸಿಸ್ ಉಗ್ರರು ಅಡಗಿದ್ದಾರೆ ಎನ್ನುವ ಮಾಹಿತಿ ಪಡೆದ ಪೊಲೀಸರು, ಇರಾಕಿ ಸೇನೆಯ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಉಗ್ರರ ಹತ್ಯೆಗೈದಿವೆ. 
 
ಕಳೆದ 2014ರ ಜೂನ್ 29 ರಂದು ಇದೇ ಮಸೀದಿಯಲ್ಲಿ ಐಸಿಸ್ ಸಂಸ್ಥಾಪಕ ಅಬು ಬಕ್ರ ಅಲ್ ಬಗ್ದಾದಿ ತಮ್ಮನ್ನು ತಾವೇ ಐಸಿಸ್ ಮುಖ್ಯಸ್ಥ ಎಂದು ಘೋಷಿಸಿಕೊಂಡಿದ್ದನು.
 
ಸುಮಾರು ಎಂಟು ಗಂಟೆಗಳ ಕಾಲ ಉಗ್ರರೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇರಾಕ್ ಸೇನೆ ವಶಪಡಿಸಿಕೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ