40 ಚ್ಯೂಯಿಂಗ್ ಗಮ್ ನುಂಗಿದ 5 ವರ್ಷದ ಬಾಲಕ !

ಸೋಮವಾರ, 29 ಮೇ 2023 (08:02 IST)
ನ್ಯೂಯಾರ್ಕ್ : ಅಮೆರಿಕದ 5 ವರ್ಷದ ಬಾಲಕನೊಬ್ಬ 40 ಚ್ಯೂಯಿಂಗ್ ಗಮ್ ನುಂಗಿದ ಪರಿಣಾಮ ಜಠರದಲ್ಲಿ ಸಮಸ್ಯೆಯಾಗಿ ಗಂಭೀರ ಸ್ಥಿತಿಗೆ ತಲುಪಿದ್ದಾನೆ. ಬಾಲಕನನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಹೊಟ್ಟೆ ಸಮಸ್ಯೆಯಿಂದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಹೊಟ್ಟೆ ಸ್ಕ್ಯಾನ್ ಮಾಡಿದಾಗ, ಹೆಚ್ಚಿನ ಪ್ರಮಾಣದ ಚ್ಯೂಯಿಂಗ್ ಗಮ್ ನುಂಗಿರುವುದು ಪತ್ತೆಯಾಗಿದೆ. ಜೀರ್ಣವಾಗದ ಈ ಪದಾರ್ಥ ಬಾಲಕನ ಜಠರದಲ್ಲಿ ಅಡಚಣೆ ಉಂಟುಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ವೈದ್ಯರು ಅವನ ಗಂಟಲಿನ ಕೆಳಗೆ ಲೋಹದ ಟ್ಯೂಬ್ ಇರಿಸುವ ಮೂಲಕ ಚ್ಯೂಯಿಂಗ್ ಗಮ್ ತೆಗೆದುಹಾಕಿದರು. ಚಿಕಿತ್ಸೆಯಿಂದ ಬಾಲಕನಿಗೆ ಸದ್ಯದ ಮಟ್ಟಿಗೆ ಗಂಟಲು ನೋವಿದ್ದರೂ, ದೀರ್ಘಾವಧಿಯ ಆರೋಗ್ಯ ಸಮಸ್ಯೆ ಇರಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಬಳಿಕ ಬಾಲಕನನ್ನು ಡಿಸ್ಚಾರ್ಜ್ ಮಾಡಿದ್ದಾರೆ.

ಜೀರ್ಣವಾಗದ ಚ್ಯೂಯಿಂಗ್ ಗಮ್ ಪದಾರ್ಥವನ್ನು ಅಕಸ್ಮಾತ್ ನುಂಗಿದರೆ 7 ವರ್ಷಗಳ ವರೆಗೆ ಹೊಟ್ಟೆಯಲ್ಲಿರುತ್ತದೆ ಎಂದು ನಂಬಲಾಗಿತ್ತು. ಇದು ತಪ್ಪು ಕಲ್ಪನೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ