ಫ್ರಿಡ್ಜ್‌ನಲ್ಲಿ ಕುಳಿತು ಭೂಕುಸಿತದಿಂದ ಪಾರಾದ ಬಾಲಕ!

ಶನಿವಾರ, 23 ಏಪ್ರಿಲ್ 2022 (14:29 IST)
ಮನಿಲಾ : ಫಿಲಿಪೀನ್ಸ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ವರ್ಷದ ಬಾಲಕನೊಬ್ಬ ಫ್ರಿಡ್ಜ್ನೊಳಗೆ ಇದ್ದು ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ.

ಸಿ.ಜೆ.ಜಸ್ಮೆ(11) ಬದುಕುಳಿದ ಬಾಲಕ. ಭಾರೀ ಬಿರುಗಾಳಿಯಿಂದ ಭೂ ಕುಸಿತ ಸಂಭವಿಸಿತ್ತು. ಆ ವೇಳೆಗೆ ಜಸ್ಮೆ ತನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದ. ಆದರೆ ಭೂಕುಸಿತದಿಂದಾಗಿ ಆತ ಫ್ರಿಡ್ಜ್ನೊಳಗೆ ಕುಳಿತುಕೊಂಡಿದ್ದ. ಸತತ 20 ಗಂಟೆಗಳ ನಂತರ ಅಧಿಕಾರಿಗಳು ಕಾರ್ಯಾಚರಣೆ ಮಾಡುವಾಗ ಸಿಕ್ಕಿದ್ದಾನೆ.

ಚಂಡಮಾರುತದ ಹಿನ್ನೆಲೆಯಲ್ಲಿ ಲೇಯ್ಟ್ ಪ್ರಾಂತ್ಯದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವೇಶೇಷಗಳ ಅಡಿಯಲ್ಲಿ ಫ್ರಿಡ್ಜ್ ಸಿಕ್ಕಿದೆ.

ಅದನ್ನು ಸಾಗಿಸುವಾಗ ತೂಕ ಹೆಚ್ಚಾಗಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ನಂತರ ಬಾಗಿಲು ತೆರೆದಾಗ ಬಾಲಕ ಪ್ರತ್ಯಕ್ಷವಾಗಿದ್ದಾನೆ. ತಕ್ಷಣ ಆತನನ್ನು ಫ್ರೀಡ್ಜ್ನಿಂದ ತೆಗೆದು ರಕ್ಷಿಸಿದ್ದಾರೆ. ನಂತರ ಅವನಿಗೆ ನೀರನ್ನು ನೀಡಿ ಉಳಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಆಗ ಜಸ್ಮೆ ನಾನು ಒಬ್ಬನೇ ಉಳಿದಿದ್ದೇನೆ ಎಂದು ಭಾವುಕನಾದನು.  ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಘಟನೆಯಿಂದಾಗಿ ಜಸ್ಮೆಯ ಕಾಲು ಮುರಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ