ನ್ಯೂಯಾರ್ಕ್ : ಎರಡು ಕೈಗಳಿಂದ ಎಲ್ಲರೂ ಚಪ್ಪಾಳೆ ತಟ್ಟಬಹುದು. ಆದರೆ ಒಂದೇ ಕೈಯಿಂದ ಚಪ್ಪಾಳೆ ತಟ್ಟುವುದು ಅಸಾಧ್ಯ. ಆದರೆ ನ್ಯೂಯಾರ್ಕ್ ನ ಒಬ್ಬ ವ್ಯಕ್ತಿ ಇದನ್ನು ಸಾಧಿಸಿ ತೋರಿಸಿದ್ದಾನೆ.
ಕೋರಿ ಮಾಸೆಲ್ಲಾರೋ ಎಂಬ ವ್ಯಕ್ತಿ 1 ನಿಮಿಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಕೈಯಿಂದ ಚಪ್ಪಾಳೆ ತಟ್ಟಿ ಗಿನ್ನಿಸ್ ದಾಖಲೆ ನಿರ್ಮಿಸಬೇಕೆಂದು ಪಣತೊಟ್ಟಿದ್ದರು. ಆದರೆ ಬ್ರೂಕ್ ಹೇವನ್ ಹೆರಿಟೇಜ್ ಪಾರ್ಕ್ ನಲ್ಲಿ ಜನರ ಮುಂದೆ ಈ ಸವಾಲನ್ನು ಸ್ವೀಕರಿಸಿ ಒಂದೇ ಕೈಯಿಂದ ಸೆಕೆಂಡಿಗೆ ಸರಾಸರಿ 14 ಚಪ್ಪಾಳೆಯಂತೆ 853 ಚಪ್ಪಾಳೆಗಳನ್ನು ತಟ್ಟಿ ಯಶಸ್ವಿಯಾಗಿದ್ದಾರೆ.
ಆ ಮೂಲಕ ಕೋರಿ ಈ ಹಿಂದೆ 2019ರಲ್ಲಿ ಇರಾಕ್ ನ ಹಸನ್ ಅಲ್ವಜಲಿ 685 ಚಪ್ಪಾಳೆ ತಟ್ಟಿ ನಿರ್ಮಿಸಿದ ದಾಖಲೆಯನ್ನು ಮುರಿದಿದ್ದಾರೆ ಎನ್ನಲಾಗಿದೆ.