ವಿದ್ಯಾರ್ಥಿಗಳಿಗೆ ಲವ್ ಮಾಡಲು ಒಂದು ವಾರ ರಜೆ

ಮಂಗಳವಾರ, 4 ಏಪ್ರಿಲ್ 2023 (11:05 IST)
ಬೀಜಿಂಗ್ : ಚೀನಾದಲ್ಲಿ ಯುವಜನರ ಸಂಖ್ಯೆ ಕಡಿಮೆಗೊಳ್ಳುತ್ತಿದ್ದು, ಇದನ್ನು ಹೋಗಲಾಡಿಸಲು ಅಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ ಮಾಡಲೆಂದೇ ಒಂದು ವಾರಗಳ ಕಾಲ ರಜೆಯನ್ನು ನೀಡಲಾಗಿದೆ.
 
ಈಗಾಗಲೇ ಚೀನಾದಲ್ಲಿ ಜನಸಂಖ್ಯೆಯು ಕಡಿಮೆಗೊಳ್ಳುತ್ತಿದೆ. ಇದರಿಂದಾಗಿ ಅಲ್ಲಿನ ಆರ್ಥಿಕತೆಯ ಮೇಲೆ ಪ್ರಭಾವವನ್ನು ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಅಲ್ಲಿನ ಸರ್ಕಾರ ನಾನಾ ರೀತಿಯ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಇದೀಗ ಚೀನಾದ 9 ಕಾಲೇಜಿಗಳಲ್ಲಿ ಏಪ್ರಿಲ್ನಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ ಮಾಡಲು ಒಂದು ವಾರಗಳ ಕಾಲ ರಜೆ ನೀಡುವ ಯೋಜನೆಯನ್ನು ತಂದಿದೆ.

ವರದಿಗಳ ಪ್ರಕಾರ ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ 9 ಕಾಲೇಜುಗಳಲ್ಲಿ ಒಂದಾದ ಮಿಯಾನ್ಯಾಂಗ್ ಫ್ಲೈಯಿಂಗ್ ವೊಕೇಶನಲ್ ಕಾಲೇಜ್, ಮಾ. 21 ರಂದು ಈ ರೀತಿಯ ರಜೆಯನ್ನು ಘೋಷಿಸಿತ್ತು. ಅದಾದ ಬಳಿಕ ಏ.1 ರಿಂದ 7 ರವರೆಗೆ ವಿದ್ಯಾರ್ಥಿಗಳಿಗೆ ಪ್ರೀತಿಸಲು ಹಾಗೂ ಪ್ರೀತಿಯನ್ನು ಆನಂದಿಸಲು ಅದರ ಜೊತೆ ಜೊತೆಗೆ ಪ್ರಕೃತಿಯನ್ನು ಪ್ರೀತಿಸಲು, ಜೀವನವನ್ನು ಪ್ರೀತಿಸುವುದನ್ನು ಕಲಿಯಲು ಪ್ರೋತ್ಸಾಹಿಸುತ್ತಿದೆ.

ಈ ಬಗ್ಗೆ ಅಲ್ಲಿನ ಪ್ರಾಂಶುಪಾಲರು ಮಾತನಾಡಿ, ಇದರಿಂದಾಗಿ ವಿದ್ಯಾರ್ಥಿಗಳು ಹಸಿರಾದ ಪ್ರದೇಶಗಳನ್ನು ನೋಡಲು, ಅಲ್ಲಿನ ಪರಿಸರವನ್ನು ಅನುಭವಿಸಲು ಸಹಾಯಕವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ತರಗತಿಗಳಲ್ಲಿ ಕಲಿಸುವ ಬೋಧನಾ ವಿಷಯಕ್ಕೂ ಸಹಾಯವಾಗುತ್ತದೆ. ಜೊತೆಗೆ ಜನನದ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ