ಬಾಲಕಿಗೆ ಇಂಡಿಯಾನದಲ್ಲಿ ಗರ್ಭಪಾತ!

ಸೋಮವಾರ, 4 ಜುಲೈ 2022 (15:43 IST)
ವಾಷಿಂಗ್ಟನ್ : ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ಈಚೆಗಷ್ಟೇ ರದ್ದುಗೊಳಿಸಿದೆ.
 
ಈ ನಡುವೆ ಒಹಿಯೋ ರಾಜ್ಯದಲ್ಲಿ ಅತ್ಯಾಚಾರಕ್ಕೆ ಬಲಿಯಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯನ್ನು ಗರ್ಭಪಾತ ಚಿಕಿತ್ಸೆಗಾಗಿ ಇಂಡಿಯಾನಕ್ಕೆ ಕರೆದೊಯ್ಯಲು ಒತ್ತಾಯಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮರಿಕದ ಒಹಿಯೋದಲ್ಲಿ ಅತ್ಯಾಚಾರಕ್ಕೆ ಬಲಿಯಾಗಿ 6 ವಾರಗಳ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯೊಬ್ಬಳನ್ನು ಗರ್ಭಪಾತಕ್ಕಾಗಿ ಇಂಡಿಯಾನಕ್ಕೆ ಕಳುಹಿಸುವಂತೆ ಒತ್ತಾಯಿಸಲಾಗಿದೆ.

ಅಮೆರಿಕದಲ್ಲಿ ಗರ್ಭಪಾತ ಹಕ್ಕನ್ನು ನಿಷೇಧಿಸಿದ ನಂತರ ಜೂನ್ 24ರಂದು ಒಹಿಯೋದಲ್ಲಿ ಅಧಿಕೃತವಾಗಿ ಜಾರಿಗೆ ತರಲಾಯಿತು. ಹಾಗಾಗಿ ಗರ್ಭಪಾತ ಮಾಡಿಸಲು ಅವಕಾಶವಿಲ್ಲದಿದ್ದರಿಂದ ಇಂಡಿಯಾನ ರಾಜ್ಯಕ್ಕೆ ಕಳುಹಿಸುವಂತೆ ಒತ್ತಾಯಿಸಲಾಯಿತು. 

ಇಂಡಿಯಾನದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ.ಕೈಟ್ಲಿನ್ ಬರ್ನಾರ್ಡ್ ಅವರು ಅತ್ಯಾಚಾರಕ್ಕೆ ಒಳಗಾಗಿದ್ದ ಮಗುವಿಕೆ ಚಿಕಿತ್ಸೆ ನೀಡುವಂತೆ ಸಹಾಯ ಕೋರಿದ್ದರು. 

ಇಂಡಿಯಾನಾ ರಾಜ್ಯದಲ್ಲಿ ಗರ್ಭಪಾತವು ಇನ್ನೂ ಕಾನೂನು ಬಾಹಿರವಾಗಿಲ್ಲ. ಆದರೆ ಇಲ್ಲಿನ ಶಾಸಕರು ಇದೇ ತಿಂಗಳ ಕೊನೆಯಲ್ಲಿ ಅಧಿವೇಶನ ಕರೆಯಲಿದ್ದು, ಕಾರ್ಯವಿಧಾನವನ್ನು ನಿಷೇಧಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ