ACB ರೇಡ್ ಆದ ಬೆಂಗಳೂರಿನ ಮೂವರು ಅಧಿಕಾರಿಗಳ ವಿರುದ್ಧ FIR ದಾಖಲಿಸಲಾಗಿದೆ. ಮಾರ್ಚ್ 16 ರಂದು 18 ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಲಾಗಿತ್ತು. B.K. ಶಿವಕುಮಾರ್, ಜ್ಞಾನೇಂದ್ರ ಕುಮಾರ್, ರಾಕೇಶ್ ಕುಮಾರ್ ಈ ಅಧಿಕಾರಿಗಳ ಮನೆ ಮೇಲೆ ರೇಡ್ ನಡೆದ ವೇಳೆ ಆದಾಯಕ್ಕೂ ಮೀರಿದ ಆಸ್ತಿ-ಪಾಸ್ತಿ ಪತ್ತೆ ಹಿನ್ನೆಲೆ ಮೂವರ ಮನೆಯಲ್ಲಿ ಸಿಕ್ಕ ದಾಖಲೆ, ಆಸ್ತಿ-ಪಾಸ್ತಿ ಕಡತಗಳು, ಸೈಟ್ ದಾಖಲೆಗಳು, ಚಿನ್ನಾಭರಣ ಸೇರಿ ಇತರೆ ಆದಾಯ ಪರಿಶೀಲನೆ ನಡೆಸಲಾಗಿತ್ತು.