ಉಗ್ರರಿಗೆ ಆರ್ಥಿಕ ನೆರವು ನೀಡಿದ ಆರೋಪ; ಹಫೀಜ್ ಸಯೀದ್ ದೋಷಿ ಎಂದ ಪಾಕ್ ಕೋರ್ಟ್

ಗುರುವಾರ, 12 ಡಿಸೆಂಬರ್ 2019 (06:28 IST)
ಲಾಹೋರ್ : ಪಾಕಿಸ್ತಾನದ ನ್ಯಾಯಾಲಯದಲ್ಲಿ ಭಯೋತ್ಪಾದನೆಯ ರೂವಾರಿ ಹಫೀಜ್ ಸಯೀದ್ ಉಗ್ರರಿಗೆ ಆರ್ಥಿಕ ನೆರವು ನೀಡಿದ ಎಂದು ಸಾಬೀತಾಗಿದೆ.



ಪಂಜಾಬ್ ರಾಜ್ಯದ ವಿವಿಧ ನಗರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಪೂರೈಸುವ ಆರೋಪದ ಮೇಲೆ   ಹಫೀಜ್ ಸಯೀದ್ ಹಾಗೂ ಆತನ ಸಹಚರರನ್ನು ಪಂಜಾಬ್ ಪೊಲೀಸರು ಬಂಧಿಸಿ ಕೇಸ್ ದಾಖಲಿಸಿದ್ದಾರೆ.


ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈಗ ಹಫೀಜ್ ಸಯೀದ್ ಜನರಿಂದ ಆರ್ಥಿಕ ನೆರವು ಪಡೆದು ಅದರಿಂದ ಉಗ್ರ ಸಂಘಟನೆಗಳಿಗೆ  ಆರ್ಥಿಕ ನೆರವು ನೀಡುತ್ತಿದ್ದ ಎಂದು ಆದೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ