ಉಗ್ರರನ್ನು ಸದೆಬಡಿ, ಇಲ್ಲವೇ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಏಕಾಂಗಿಯಾಗಿ: ಸೇನೆಗೆ ಷರೀಫ್ ವಾರ್ನಿಂಗ್

ಗುರುವಾರ, 6 ಅಕ್ಟೋಬರ್ 2016 (14:04 IST)
ದೇಶದಲ್ಲಿರುವ ಉಗ್ರರನ್ನು ಸದೆಬಡಿ, ಇಲ್ಲವೇ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಏಕಾಂಗಿಯಾಗಿ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಪಾಕ್ ಸೇನಾಪಡೆಗಳಿಗೆ ಮತ್ತು ಐಎಸ್‌ಐಗೆ ಎಚ್ಚರಿಕೆ ನೀಡಿದ್ದಾರೆ.
 
ಪಾಕ್ ಮಾಧ್ಯಮಗಳ ಪ್ರಕಾರ, ಐಎಸ್‌ಐ ಮುಖ್ಯಸ್ಥ ಜನರಲ್ ರಿಜ್ವಾನ್ ಅಖ್ತರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸೀರ್ ಜಂಜುವಾ ಉಪಸ್ಥಿರಿದ್ದ ಸಭೆಯಲ್ಲಿ ಪ್ರಧಾನಿ ನವಾಜ್ ಷರೀಪ್‌ ಹೇಳಿಕೆ ನೀಡಿ, ದೇಶದ ನಾಲ್ಕು ಪ್ರಾಂತ್ಯಗಳಲ್ಲಿರುವ ಉಗ್ರರನ್ನು ಆದಷ್ಟು ಬೇಗ ಸದೆಬಡೆಯಬೇಕು ಎಂದು ಕೋರಿದ್ದಾಗಿ ಮೂಲಗಳು ತಿಳಿಸಿವೆ.
 
ಒಂದು ವೇಳೆ, ಪಾಕ್ ಸರಕಾರ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಆದೇಶ ನೀಡಿದಲ್ಲಿ ಸೇನಾ ಗುಪ್ತಚರ ಸಂಸ್ಥೆ ಮಧ್ಯಪ್ರವೇಶಿಸುವುದಿಲ್ಲ ಎಂದು ಭರವಸೆ ನೀಡಿದ್ದಾಗಿ ಮೂಲಗಳು ತಿಳಿಸಿವೆ. 
 
ಪಠಾನ್‌ಕೋಟ್ ಉಗ್ರರ ದಾಳಿ ಮತ್ತು ಮುಂಬೈ ದಾಳಿ ಕುರಿತಂತೆ ನಡೆಯುತ್ತಿರುವ ವಿಚಾರಣೆಗಳಿಗೆ ವೇಗ ನೀಡಬೇಕು ಎಂದು ಪ್ರಧಾನಿ ನವಾಜ್ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ