ಕೀವ್ : ರಷ್ಯಾ-ಉಕ್ರೇನ್ ಯುದ್ಧ 13ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ಸೇನೆ ಉಕ್ರೇನ್ನ 202 ಶಾಲೆ ಮತ್ತು 34 ಆಸ್ಪತ್ರೆಯನ್ನು ಧ್ವಂಸ ಮಾಡಿರುವ ಬಗ್ಗೆ ವರದಿಯಾಗಿದೆ.
ಕೀವ್ ನಗರದ 202 ಶಾಲೆ, 34 ಆಸ್ಪತ್ರೆ ಮತ್ತು 1,500ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ರಷ್ಯಾ ಸೇನೆ ಕ್ಷಿಪಣಿ, ರಾಕೆಟ್ ದಾಳಿಯ ಮೂಲಕ ಧ್ವಂಸ ಮಾಡಿದೆ. ಅಲ್ಲದೇ ಉಕ್ರೇನ್ನಲ್ಲಿರುವ 900ಕ್ಕೂ ಅಧಿಕ ವಸತಿ ಕಟ್ಟಡಗಳಲ್ಲಿ ನೀರು, ಕರೆಂಟ್ ಇಲ್ಲದೆ ಜನ ಪರದಾಡುತ್ತಿದ್ದಾರೆ.
ರಷ್ಯಾ ದಾಳಿಗೆ ಖಾರ್ಕೀವ್ ಸಂಪೂರ್ಣ ಸ್ಮಶಾನದಂತಾಗಿದ್ದು, ಇಂದು ಕೂಡ ಪೆಟ್ರೋಲ್ ಪ್ಲಾಂಟ್ಗಳ ಮೇಲೆ ರಾಕೆಟ್ ದಾಳಿ ಮುಂದುವರಿದಿದೆ. ಇತ್ತ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್, ರಷ್ಯಾ ಸೇನಾ ವಾಹನಗಳ ಮೇಲೆ ಡ್ರೋಣ್ ದಾಳಿ ನಡೆಸುತ್ತಿದೆ. ಇತ್ತ ಉಕ್ರೇನ್ನ 26ಕ್ಕೂ ಹೆಚ್ಚು ಯುದ್ಧ ವಾಹನಗಳು ಸಂಪೂರ್ಣ ನೆಲಕಚ್ಚಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಮತ್ತೊಮ್ಮೆ ಗುಡುಗಿದ್ದಾರೆ. ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಝೆಲೆನ್ಸ್ಕಿ, ನಾನು ಕೀವ್ನಲ್ಲಿ ಇದ್ದು, ಇಲ್ಲಿಂದ ಓಡಿಹೋಗುವ ಪ್ರಶ್ನೆಯೇ ಇಲ್ಲ. ಯುದ್ಧವನ್ನು ಗೆಲ್ಲಲು ನಾವು ಯಾವ ರೀತಿಯ ಕ್ರಮವನ್ನು ಕೈಗೊಳ್ಳಲು ಸಿದ್ಧರಿದ್ದೇವೆ. ನನ್ನ ಕೊನೆ ಉಸಿರುರುವರೆಗೂ ಯುದ್ಧ ಮಾಡುತ್ತೇನೆ ಎಂದು ರಷ್ಯಾಗೆ ಎಚ್ಚರಿಕೆ ರವಾನಿಸಿದ್ದಾರೆ.