ಕೀವ್ : ಉಕ್ರೇನ್ ಮೇಲೆ ರಣರಕ್ಕಸ ಸ್ವರೂಪದಲ್ಲಿ ಸತತ 11ನೇ ದಿನವೂ ರಷ್ಯಾ ಸೇನಾ ಮುಗಿಬಿದ್ದಿದೆ.
ಹಗಲು ರಾತ್ರಿ ಎನ್ನದೇ, ಉಸಿರಾಡಲು ಸ್ವಲ್ಪವೂ ಬಿಡದಂತೆ ಬಾಂಬ್ಗಳ ಸುರಿಮಳೆಗೈಯ್ಯುತ್ತಿದೆ. ಕೀವ್ ನಗರ ತತ್ತರಿಸಿ ಹೋಗಿದೆ. ಈಗಾಗಲೇ ಖೇರ್ಸಾನ್ ನಗರ ವಶಪಡಿಸಿಕೊಂಡಿರುವ ರಷ್ಯಾ ಪಡೆಗಳು ಖಾರ್ಕಿವ್ ಮೇಲೆ ಪಟ್ಟು ಸಾಧಿಸಲು ನೈಟ್ ಆಪರೇಷನ್ ಕೈಗೊಂಡಿದೆ.
ನೂರಾರು ಕ್ಷಿಪಣಿಗಳನ್ನು ಹಾರಿಸಿ ಭಾರೀ ಸಾವು ನೋವಿಗೆ ಕಾರಣವಾಗಿದೆ. ಸುಮಿ, ಮರಿಯುಪೋಲ್, ವೋಲ್ನೋವ್ಖಾ ನಗರಗಳಿಗೆ ಮುತ್ತಿಗೆ ಹಾಕಿದೆ. ಕೀವ್, ಬುಚಾ ನಗರಗಳಲ್ಲಿ ಜನವಸತಿ, ಸೇನೆಯ ವೈಮಾನಿಕ ನೆಲೆಗಳ ಮೇಲೆ ಶೆಲ್, ಮಿಸೈಲ್ ಟ್ಯಾಕ್ ಮಾಡಿದೆ. ಉಕ್ರೇನ್ನ ಛಾಶ್ಚಿಯಾ ನಗರವನ್ನು ಹಿಡಿತಕ್ಕೆ ತೆಗೆದುಕೊಂಡಿರೋದಾಗಿ ರಷ್ಯಾ ಘೋಷಿಸಿದೆ.
ಸ್ಮಶಾನದಂತೆ ಆಗಿರುವ ಕೀವ್ ನಗರದ ಡ್ರೋನ್ ವಿಡೀಯೋ ರಿಲೀಸ್ ಮಾಡಿದೆ. ಈಗಾಗಲೇ ಎರಡು ರಿಯಾಕ್ಟರ್ ವಶಕ್ಕೆ ಪಡೆದಿರುವ ರಷ್ಯಾ ಪಡೆಗಳು ಈಗ ಮೂರನೇ ರಿಯಾಕ್ಟರ್ ಯೂಜ್ನೌಕ್ರೈನ್ಸ್ಕ್ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.
ಝೈಟೋಮೀರ್ನ ಮೆಟ್ರೋ ಬಳಿ ಬಾಂಬ್ ಸ್ಫೋಟಗೊಂಡಿದೆ. ಒಡೆಸಾ ಉಡಾಯಿಸಲು ರಷ್ಯಾ ತಯಾರಿ ನಡೆಸಿದೆ. ಈ ಮಧ್ಯೆ, ಉಕ್ರೇನ್ ಸೇನೆಗಳು ಪ್ರತಿರೋಧ ತೋರುತ್ತಿವೆ. ರಷ್ಯಾದ ಸುಖೋಯ್ ಯುದ್ಧ ವಿಮಾನ, ಹೆಲಿಕಾಪ್ಟರ್, ಯುದ್ಧ ಟ್ಯಾಂಕ್ನ್ನು ಉಡೀಸ್ ಮಾಡಿದೆ.