ಕೀವ್ : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿ ಅದೇಶ ಹೊರಡಿಸಿದ್ದಾರೆ.
ಭಾರತ, ಜರ್ಮನಿ, ಜೆಕ್ಗಣರಾಜ್ಯ, ನಾರ್ವೆ ಮತ್ತು ಹಂಗೇರಿ ದೇಶಗಳ ರಾಯಭಾರಿಗಳನ್ನು ಝೆಲೆನ್ಸ್ಕಿ ವಜಾಗೊಳಿಸಿರುವ ಬಗ್ಗೆ ಅಧಿಕೃತವಾಗಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಆದರೆ ಯಾವ ಕಾರಣಕ್ಕೆ ವಜಾಗೊಳಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಈ ಹಿಂದೆ ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಸಾರಿದಾಗ ಉಕ್ರೇನ್ಗೆ ಅಂತಾರಾಷ್ಟ್ರೀಯ ಬೆಂಬಲ ಮತ್ತು ಮಿಲಿಟರಿ ಸಹಾಯವನ್ನು ಹೆಚ್ಚಿಸಲು ಝೆಲೆನ್ಸ್ಕಿ ತನ್ನ ರಾಜತಾಂತ್ರಿಕರ ಬಳಿ ಮನವಿಮಾಡಿಕೊಂಡಿದ್ದರು. ಆದರೆ ಈ ವೇಳೆ ಯಾವುದೇ ನೆರವು ಸಿಕ್ಕಿರಲಿಲ್ಲ.
ಆದರೂ ರಷ್ಯಾದೊಂದಿಗೆ ನಿರಂತವಾಗಿ ಯುದ್ಧ ಮಾಡಿ ದೇಶವನ್ನು ಉಳಿಸಿಕೊಳ್ಳಲು ಉಕ್ರೇನ್ ಹೋರಾಡುತ್ತಿದೆ. ಯುದ್ಧ ನಡೆಯುತ್ತಿರುವಂತೆ ಶಕ್ತಿಶಾಲಿ ರಾಕೆಟ್ ಲಾಂಚರ್ಗಳನ್ನು ಒಳಗೊಂಡಂತೆ ಕೈವ್ಗೆ ಹೊಸ ಮಿಲಿಟರಿ ನೆರವು ನೀಡುವುದಾಗಿ ಯುನೈಟೆಡ್ ಸ್ಟೇಟ್ಸ್ ಭರವಸೆ ನೀಡಿದೆ.