ಕುವೈತ್ ನ ಅಮೀರ್ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್ ನಿಧನ

ಬುಧವಾರ, 30 ಸೆಪ್ಟಂಬರ್ 2020 (08:53 IST)
ದುಬೈ ; ಕುವೈತ್ ನ ಅಮೀರ್ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಇವರಿಗೆ 91 ವರ್ಷ ವಯಸ್ಸಾಗಿದ್ದು, ಅನಾರೋಗ್ಯದ ಹಿನ್ನಲೆಯಲ್ಲಿ ಅಮೇರಿಕಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಮಂಗಳವಾರ ನಿಧನರಾಗಿದ್ದಾರೆ.

ಇವರು 2006ರಲ್ಲಿ ಅಧಿಕಾರಕ್ಕೆ ಬಂದಿದ್ದರು. ಕುವೈತ್ ನ ಆಡಳಿತರೂಢ ಅಮಿರ್ ಆಗಿ ಅವರು ಅನೇಕ ಆಂತರಿಕ ರಾಜಕೀಯ ವಿವಾದಗಳನ್ನು ಎದುರಿಸಬೇಕಾಗಿತ್ತು. ಇವರನ್ನು ಆಧುನಿಕ ಕುವೈತ್ ನ ವಿದೇಶಾಂಗ ನೀತಿಯ ವಾಸ್ತುಶಿಲ್ಪ ಎಂದೇ ಕರೆಯಲಾಗಿತ್ತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ