ಅಮೆರಿಕದಲ್ಲಿ ಮತ್ತೆ ಕೋವಿಡ್ ಏರಿಕೆ ಆತಂಕ !

ಬುಧವಾರ, 16 ಮಾರ್ಚ್ 2022 (09:13 IST)
ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಸಾವು, ನೋವಿಗೆ ಸಾಕ್ಷಿಯಾಗಿದ್ದ ಅಮೆರಿಕದಲ್ಲಿ ಇದೀಗ ಮತ್ತೆ ಕೋವಿಡ್ ಸೋಂಕು ಏರಿಕೆಯಾಗುವ ಭೀತಿ ಎದುರಾಗಿದೆ.
 
ಇದು ಕಳೆದೊಂದು ವಾರದಿಂದಷ್ಟೇ ಹೊಸ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಇಳಿಕೆ ದಾಖಲಿಸುತ್ತಿದ್ದ ದೇಶದಲ್ಲಿ ಆತಂಕ ಸೃಷ್ಟಿಸಿದೆ.

ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಸಂಸ್ಥೆಯು ದೇಶಾದ್ಯಂತ 530 ಕೊಳಚೆ ನಿಗಾ ಪ್ರದೇಶಗಳಿಂದ ಸಂಗ್ರಹಿಸಿದ ನೀರಿನ ಮಾದರಿಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಈ ವೇಳೆ ಹಲವು ಸ್ಥಳಗಳಲ್ಲಿ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗಿರುವುದು ಕಂಡುಬಂದಿದೆ.

ಫೆ.1ರಿಂದ ಫೆ.10ರ ಅವಧಿಯಲ್ಲಿ ನಡೆಸಿದ ಕೊಳಚೆ ನೀರಿನ ಮಾದರಿ ವಿಶ್ಲೇಷಣೆಯ ಫಲಿತಾಂಶಕ್ಕೂ, ಮಾ.1ರಿಂದ 10ರ ಅವಧಿಯಲ್ಲಿ ನಡೆಸಿದ ಮಾದರಿಯ ಫಲಿತಾಂಶಕ್ಕೂ ಭಾರೀ ವ್ಯತ್ಯಾಸ ಕಂಡುಬಂದಿದೆ.

ಫೆಬ್ರುವರಿಯ ವರದಿಯ ಅನ್ವಯ 530 ಕೇಂದ್ರಗಳ ಪೈಕಿ ಶೇ.89ರಷ್ಟುಸ್ಥಳಗಳಲ್ಲಿ ಸೋಂಕು ಇಳಿಕೆಯಾಗಿದ್ದು, ಶೇ.5ರಲ್ಲಿ ಸ್ಥಿರ ಮತ್ತು ಶೇ.15ರಲ್ಲಿ ಏರಿಕೆ ಕಂಡುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ