ದೊಕ್ಲಾಮ್`ಗಾಗಿ ಏನು ಬೇಕಾದರೂ ಮಾಡಲು ಸಿದ್ಧ: ಚೀನಾದಿಂದ ಮತ್ತೊಂದು ಉದ್ಧಟತನ

ಸೋಮವಾರ, 24 ಜುಲೈ 2017 (11:19 IST)
ದೊಕ್ಲಾಮ್ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣವಿರುವ ಬೆನ್ನಲ್ಲೇ ಏನೇ ಆದರೂ ಚೀನಾದ ಪರಮಾಧಿಕಾರವನ್ನ ರಕ್ಷಿಸಿಯೇ ತೀರುವುದಾಗಿ ಚೀನಾ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ ಹೇಳಿದೆ. ಜೊತೆಗೆ ಭಾರತ ಸೇನೆಯನ್ನ ದೊಕ್ಲಾಮ್`ನಿಂದ ಕಾಲ್ತೆಗೆಯುವಂತೆ ಒತ್ತಾಯಿಸಿದೆ.
 

ಚೀನಾ ಈ ಬಗ್ಗೆ ತುರ್ತು ಕ್ರಮಗಳನ್ನ ಕೈಗೊಳ್ಳುತ್ತಿದ್ದು, ಗಡಿಯಲ್ಲಿ ಸೇನೆಯನ್ನ ನಿಯೋಜಿಸುವುದನ್ನ ಮುಂದುವರೆಸುತ್ತೇವೆ ಎಂದು ಸೇನೆಯ 90ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಭಾರತವನ್ನ ಬೆದರಿಸುವ ಮಾತುಗಳನ್ನ ಚೀನಾ ಸೇನೆ ಆಡಿದೆ. ಪರ್ವತವನ್ನ ಅಲ್ಲಾಡಿಸುವುದು ತುಂಬಾ ಕಷ್ಟ, ಚೀನಾ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ ಅಲುಗಾಡಿಸುವುದು ಇನ್ನಷ್ಟು ಕಷ್ಟ.ಎಂದು ಚೀನಾ ರಕ್ಷಣಾ ಇಲಾಖೆಯ ವಕ್ತಾರ ಸೀನಿಯರ್ ಕಲೋನಿಯಲ್ ವೂ ಕಿಯಾನ್ ಬೆದರಿಸಿದ್ದಾರೆ.

ಪಿಎಲ್`ಎಯ 90 ವರ್ಷಗಳಲ್ಲಿ ಇತಿಹಾಸದಲ್ಲಿ ದೇಶದ ಪರಮಾಧಿಕಾರ ರಕ್ಷಣೆಯಲ್ಲಿ ನಮ್ಮ ಪಾತ್ರ ಏನೆಂಬುದು ಸಾಬೀತಾಗಿದೆ. ದೊಕ್ಲಾಮ್`ನಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಚೀನಾದ ಪರಮಾಧಿಕಾರ ಮತ್ತು ಕಾನೂನುಬದ್ಧವಾಗಿದೆ ಎಂದು ಸೇನಾಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ