ಧರ್ಮಸ್ಥಳದಲ್ಲಿ ಅಗೆಯುವ ಸ್ಥಳದಲ್ಲಿ ಇವರಿಂದಲೇ ಪೊಲೀಸರಿಗೆ ದೊಡ್ಡ ಸಮಸ್ಯೆ
ನೇತ್ರಾವತಿ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಅನಾಮಿಕ ದೂರುದಾರ ಗುರುತಿಸಿದ ಸ್ಥಳಗಳಲ್ಲಿ ಅಗೆಯುವ ಕೆಲಸ ನಡೆಯುತ್ತಿದೆ. ನಿನ್ನೆ ಆತ ಹೇಳಿದ 6 ನೇ ಪಾಯಿಂಟ್ ನಲ್ಲಿ ಅಗೆದಾಗ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ. ಹೀಗಾಗಿ ಎಸ್ಐಟಿ ಈಗ ಬಹಳ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ.
ನಿನ್ನೆ ಮಾನವನ ಮೂಳೆ ಪತ್ತೆಯಾಗುತ್ತಿದ್ದಂತೇ ಆ ಜಾಗಕ್ಕೆ ಬಟ್ಟೆ ಕಟ್ಟಿ ಯಾರಿಗೂ ಕಾಣದಂತೆ ಪೊಲೀಸರು ಸರ್ಪಗಾವಲು ಹಾಕಿದ್ದರು. ಇಂದು 8 ನೇ ಪಾಯಿಂಟ್ ನಲ್ಲಿ ಅಗೆತ ನಡೆಯುತ್ತಿದ್ದು ಇಲ್ಲೂ ಪೊಲೀಸರು ಅಡ್ಡ ಬಟ್ಟೆ ಕಟ್ಟಿ ಸಾರ್ವಜನಿಕರಿಗೆ ಕಾಣದಂತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನಿನ್ನೆ ಅಸ್ಥಿ ಪಂಜರ ಸಿಕ್ಕಿದೆ ಎಂದು ತಿಳಿದ ಮೇಲೆ ಸಾಕಷ್ಟು ಜನ ಈಗ ಕುತೂಹಲದಿಂದ ಕಾರ್ಯಾಚರಣೆ ವಿಕ್ಷಿಸಲು ಇಲ್ಲಿಗೆ ಬರುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದು ಮತ್ತು ಕಾರ್ಯಾಚರಣೆಯ ಗೌಪ್ಯತೆ ಕಾಪಾಡುವುದೇ ಪೊಲೀಸರಿಗೆ ತಲೆನೋವಾಗಿದೆ.